Kshetra Samachara

Local News Subject: 
ಉಡುಪಿ: 60 ಬಾರಿ ರಕ್ತದಾನ ಮಾಡಿದ್ದಾರೆ ಕಾರ್ಕಳದ ಶೈಲೇಂದ್ರ ರಾವ್ !
City: 
Udupi
Mangalore
Video Thumbnail: 
PublicNext--515199--node-nid
Category: 
Health & Fitness
Human Stories
Body: 

ಕಾರ್ಕಳ: ರಕ್ತದಾನ ಶ್ರೇಷ್ಠದಾನ ಅಂತಾರೆ.ಅನಿವಾರ್ಯ ಸಂದರ್ಭಗಳಲ್ಲಿ ಇದು ಜೀವ ಉಳಿಸುವ ದ್ರವ.ಸಕಾಲಕ್ಕೆ ಸಿಗದೇ ಹೋದರೆ ಜೀವಕ್ಕೇ ಸಂಚಕಾರ.

ಇಂದು ವಿಶ್ವ ರಕ್ತದಾನಿಗಳ ದಿನ.ಕಾರ್ಕಳದ ಕೆ. ಶೈಲೇಂದ್ರ ರಾವ್ ಈತನಕ ಬಾರಿ ರಕ್ತದಾನ ಮಾಡಿ ಹಲವರ ಜೀವ ಉಳಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

ಉದ್ಯಮಿಯಾಗಿರುವ ಇವರು ಕಾಲೇಜಿನಲ್ಲಿರುವಾಗಲೇ ಎನ್ನೆಸ್ಸೆಸ್ ಕಾರ್ಯಕರ್ತರಾಗಿ ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ಈ ರಕ್ತದಾನ ಸೇವೆಗೆ ಅಡಿ ಇಟ್ಟವರು.ಅಲ್ಲಿಂದ ವಿವಿಧ ಸೇವಾ ಸಂಸ್ಥೆಗಳ ಪರಿಚಯವಾಗಿ ರೋಟರಿ ,ರೋಟರ್ಯಾಕ್ಟ್ ,ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಿ ಹಲವಾರು ಬಾರಿ ರಕ್ತದಾನ ಮಾಡುವ ಅವಕಾಶ ದೊರೆತಿದೆ. ಬಿ ನೆಗೆಟಟಿವ್ ರಕ್ತ ಹೊಂದಿರುವವರು ವಿರಳ: ಇವರು ಬಿ ನೆಗೆಟಿವ್ ರಕ್ತವನ್ನು ವರ್ಷಕ್ಕೆ 3 ಅಥವಾ ನಾಲ್ಕು ಬಾರಿಯಂತೆ ದಾನ ಮಾಡುತ್ತಾ ಬಂದಿದ್ದಾರೆ!

ಯಾವುದೇ ಪ್ರತಿಫಲಾಕಾಂಕ್ಷೆ ಇಲ್ಲದೆ ಕೇವಲ ಸೇವಾ ಮನೋಭಾವದಿಂದ ಇವರು ಇದುವರೆಗೆ ರಕ್ತದಾನ ಮಾಡಿದ್ದಾರೆ.ರಕ್ತ ಸ್ವೀಕರಿಸಿದ ವ್ಯಕ್ತಿ ಧನ್ಯವಾದ ಹೇಳುವಾಗ ಅಥವಾ ಕೃತಜ್ಞತಾಭಾವವನ್ನು ಸಲ್ಲಿಸುವಾಗ ಸಿಗುವಂಥ ಸಂತೋಷ ಬೇರೆಲ್ಲ ಪ್ರಶಸ್ತಿಗಿಂತ ಹೆಚ್ಚು ಎಂಬುದು ಶೈಲೇಂದ್ರ ಅವರ ಅಭಿಪ್ರಾಯ. ಹಲವಾರು ರಕ್ತದಾನ ಶಿಬಿರವನ್ನು ಆಯೋಜಿಸಿದ ಹೆಗ್ಗಳಿಕೆ ಕೂಡ ಇವರದ್ದು.

Reach Count: 
24559