Home

E.g., 25/07/2021
Public News
PublicNext-497383-553442-Law-and-Order-Government-node
Subject ಇನ್ಮುಂದೆ ಹೊಯ್ಸಳ-ಚೀತಾ 10 ನಿಮಿಷಕ್ಕಿಂತ ಹೆಚ್ಚು ಸಮಯ ಒಂದೇ ಕಡೆ ಇರುವಂತಿಲ್ಲ?

ಬೆಂಗಳೂರು: ಸಿಲಿಕಾನ್ ಸಿಟಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲ್ಲೇ ಇವೆ. ಹೀಗಾಗಿ ಅಪರಾಧ ಚಟುವಟಿಕೆ ನಡೆಯದಂತೆ, ಒಂದು ವೇಳೆ ನಡೆದರೂ ತಕ್ಷಣ ಹಾಜರಾಗಿ ಸೂಕ್ತ ಕ್ರಮಕೈಗೊಳ್ಳಲು ನಿಯೋಜಿಸಲಾಗಿರುವ ಹೊಯ್ಸಳ-ಚೀತಾಗಳಿಗೆ ಸದ್ಯದಲ್ಲೇ ಹೊಸ ಕಮಾಂಡ್​ ಬರಲಿದೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸರಗಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣ ತಪ್ಪಿಸಲು ಹೊಯ್ಸಳ-ಚೀತಾ ಸಿಬ್ಬಂದಿಗೆ ಹೊಸ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್‌ಗಳು ಗಸ್ತು ತಿರುಗುತ್ತಿವೆ. ಹೊಯ್ಸಳ ಬೀಟ್ ವ್ಯವಸ್ಥೆ ಸಂಬಂಧ ಇಷ್ಟು...
Category: Law and Order, Government
Post date: 24-07-2121

Kshetra Samachara

Subject ಧಾರವಾಡ : ಕ್ಯಾರಕೊಪ್ಪ ಗ್ರಾಮದ ವಡ್ಡಿನ ಕೇರೆ ಭರ್ತಿ: ಪಂಚಾಯತಿ ಕ್ರಮ

ಧಾರವಾಡ : ತಾಲೂಕಿನಾದ್ಯಂತ ವರುಣನ ಆರ್ಭಟ ಹಿನ್ನೆಲೆಯಲ್ಲಿ ಕ್ಯಾರಕೊಪ್ಪಗ್ರಾಮದ ವಡ್ಡಿನ ಕೇರೆ ಭರ್ತಿಯಾಗಿದೆ.ಗ್ರಾಮದ ಹೊಲದ ರಸ್ತೆಯಲ್ಲಿರು ವಡ್ಡಿನ ಕೆರೆಗೆ ಈ ಹಿನ್ನೆಲೆಯಲ್ಲಿ ಪಂಚಾಯತಿ ಅಧ್ಯಕ್ಷ ಶಿವಾನಂದ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗತಮರತ್ನಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೂ ಕೆರೆಯು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೋಗುವ ನಾಲಾ ಬಂದಾಗಿದ್ದು, ಈ ಹಿನ್ನೆಲೆಯಲ್ಲಿ ಜೆಸಿಬಿ ಬಳಸಿ ರಸ್ತೆ ಒಡೆದು ನಾಲವನ್ನು ನಿರ್ಮಾಣ ಮಾಡಲಾಯಿತು. ಇನ್ನೂ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚರಿಕೆ ಕ್ರಮವಾಗಿ ವಡ್ಡಿನ...
Category: Infrastructure, Nature
Post date: 24-07-2121
City: Hubballi-Dharwad

Kshetra Samachara

Subject ಧಾರವಾಡ ಜಿಲ್ಲಾ ಆಸ್ಪತ್ರೆಗೆ ಆಕ್ಸಿಜನ್ ಸಾಂದ್ರಕಗಳ ಹಸ್ತಾಂತರ

ಧಾರವಾಡ: ಬೆಂಗಳೂರಿನ ಕೆಪೆಜಿಮಿನಿ ಕಂಪೆನಿಯ ಸಿಬ್ಬಂದಿ ರವಿ ಕಾಪಸೆ ಅವರು ಶಾಸಕ ಅರವಿಂದ ಬೆಲ್ಲದ ಅವರ ಪ್ರೋತ್ಸಾಹದಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ನೀಡಿರುವ 10 ಲೀಟರ್ ಸಾಮರ್ಥ್ಯದ 22 ಆಕ್ಸಿಜನ್ ಸಾಂದ್ರಕಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು ಜಿಲ್ಲಾಸ್ಪತ್ರೆಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸೆ ಡಾ.ಶಿವಕುಮಾರ ಮಾನಕರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದಿನಕರ, ಸಾಮಾಜಿಕ ಕಾರ್ಯಕರ್ತೆ ಓಟಿಲಿ ಅನ್ಬನ್‌ಕುಮಾರ ಸೇರಿದಂತೆ ಇತರರು ಇದ್ದರು.


Category: Health & Fitness
Post date: 24-07-2121
City: Hubballi-Dharwad
Kshetra Samachara

Subject ಧಾರವಾಡ: ಹುಲ್ಲಿಕೇರಿಗೆ ಜನಪ್ರತಿನಿಧಿಗಳ ದಂಡು: ಅಧಿಕಾರಿಗಳ ಮೇಲೆ ಗರಂ

ಧಾರವಾಡ: ಅಳ್ನಾವರ ತಾಲೂಕಿನ ಹುಲ್ಲಿಕೇರಿ ಇಂದಿರಮ್ಮನ ಕೆರೆ ಅತಿವೃಷ್ಟಿಯಿಂದಾಗಿ ಒಡೆದಿದ್ದು, ಅದರ ವೀಕ್ಷಣೆಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಂಡೇ ಅಲ್ಲಿಗೆ ಆಗಮಿಸಿತ್ತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಂಡೇ ಅಲ್ಲಿಗೆ ತೆರಳಿ ಕೆರೆ ವೀಕ್ಷಣೆ ಮಾಡಿದೆ.

ಕೆರೆ ಒಡೆಯಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ಕಾರಣ ಕೆರೆಯ ಗೇಟ್ ಓಪನ್ ಆಗದ ಹಿನ್ನೆಲೆಯಲ್ಲಿ ಅವಾಂತರ...
Category: Politics
Post date: 24-07-2121
City: Hubballi-Dharwad

Kshetra Samachara

Subject ಮಂಗಳೂರು: ಕೇಂದ್ರ, ರಾಜ್ಯ ಬಿಜೆಪಿ ಸರಕಾರದ ಹಗರಣ, ಭ್ರಷ್ಟಾಚಾರದ ಬಗ್ಗೆ ಯಾವುದೇ ತನಿಖೆಯಾಗುತ್ತಿಲ್ಲ; ರಮಾನಾಥ ರೈ ಕಿಡಿ

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಸಾಕಷ್ಟು ಹಗರಣಗಳು, ಭ್ರಷ್ಟಾಚಾರಗಳು ಕಂಡು ಬಂದಿದ್ದರೂ, ಬಿಜೆಪಿಯ ಮೊಂಡ ಸರಕಾರವು ಯಾವುದನ್ನೂ ತನಿಖೆಗೊಳಪಡಿಸುತ್ತಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರ ತನ್ನ ಆಡಳಿತಾವಧಿಯಲ್ಲಿ ತಮ್ಮ ಏಳು ಪ್ರಕರಣಗಳನ್ನು ತನಿಖೆಗೆ ಒಳಪಡಿಸಿತ್ತು. ಆದರೆ ಈಗ ಆಡಳಿತದಲ್ಲಿರುವ ಬಿಜೆಪಿ ಸರಕಾರದಲ್ಲಿನ ಹಗರಣ, ಭ್ರಷ್ಟಾಚಾರಗಳ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಿದರೂ, ಬಿಜೆಪಿಗರು ಕಿವಿ ಇದ್ದೂ ಕಿವುಡರಾಗಿದ್ದಾರೆ, ಬಾಯಿಯಿದ್ದೂ ಮೂಕರಾಗಿದ್ದಾರೆ...
Category: Politics
Post date: 24-07-2121
City: Udupi, Mangalore

Kshetra Samachara

Subject ಧಾರವಾಡ : ಸಂಕಷ್ಟದಲ್ಲಿ ಸಿಲುಕಿದ ವಿಶೇಷಚೇತನ ಮಹಿಳೆ ರಕ್ಷಿಸಿದ ಯುವಕರು

ಧಾರವಾಡ : ಜಿಲ್ಲೆಯಾದ್ಯಂತ ವರುಣನ ಆರ್ಭಟ ಹಿನ್ನೆಲೆಯಲ್ಲಿ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಅಳ್ನಾವರದ ಹುಲಿಕೆರೆ ಬಸಿದು ಅಪಾರ ಪ್ರಮಾಣದ ನೀರು ಸೋರಿಕೆಯಾದ ಹಿನ್ನೆಲೆ ಟಿಳಕ ನಗರ ಜಲಾವೃತಗೊಂಡಿದೆ.ಆ ಪ್ರದೇಶದಲ್ಲಿ ವಾಸವಿದ್ದ ವಿಶೇಷಚೇತನ ಮಹಿಳೆ ಮನೆಯಿಂದ ಹೊರ ಬರಲಾಗದೆ ಪರದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಟಿಳಕ ನಗರದ ಬಸಮ್ಮ ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಾರಿ ಮಳೆಯಿಂದಾಗಿ ಆ ಮನೆಯೂ ಜಲಾವೃತವಾಗಿತ್ತು. ಈ ಹಿನ್ನೆಲೆ ಸ್ಥಳೀಯರು ಆಕೆಯನ್ನು ರಕ್ಷಿಸಿ ಸುರಕ್ಷಿತ...
Category: Human Stories
Post date: 24-07-2121
City: Hubballi-Dharwad

Public News
PublicNext--553431--node-nid
Subject ರೈತ ಪ್ರತಿಭಟನೆ ಅಸಲಿ ಮುಖ ಬಹಿರಂಗ.? ಕೇಂದ್ರದ ವಿರುದ್ಧ ಹರಿಹಾಯ್ದ ರಾಕೇಶ್ ಟಿಕಾಯತ್

ನವದೆಹಲಿ: ರೈತ ಪ್ರತಿಭಟನೆ ಅಸಲಿ ಮುಖ ಬಹಿರಂಗವಾದ ಹಿನ್ನೆಲೆಯಲ್ಲಿ ಮುಜುಗರಕ್ಕೆ ಒಳಗಾದ ರೈತ ಮುಖಂಡ ರಾಕೇಶ್ ಟಿಕಾಯತ್ ಇದೀಗ ಕೇಂದ್ರದ ಮೇಲೆ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ರೈತ ಸಂಘಟನೆಗಳ ಪ್ರತಿಭಟನೆ ಅಸಲಿಯತ್ತನ್ನು ಪಂಜಾಬ್ ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷ ಬಹಿರಂಗ ಪಡಿಸಿದ್ದರು. ಇದರಿಂದಾಗಿ ಭಾರತೀಯ ಕಿಸಾನ್ ಯೂನಿಯನ್ ಸಂಘದ ಮುಖಂಡ ರಾಕೇಶ್ ಟಿಕಾಯತ್ ಅವರು, "ರೈತರಿಗೆ ಉಳುಮೆ ಮಾತ್ರವಲ್ಲ, ಪಾಠ ಕಲಿಸಲು ತಿಳಿದಿದೆ" ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

"ಕಿವುಡ ಹಾಗೂ...
Category: Politics
Post date: 24-07-2121

Kshetra Samachara

Subject ಮಂಗಳೂರು: ಅಕ್ರಮ ನೆಲಸಿರುವ ಶ್ರೀಲಂಕಾ ಪ್ರಜೆಗಳ ಪ್ರಕರಣ; ಎನ್ಐಎ ಮೂಲಕ ತನಿಖೆ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಶ್ರೀಲಂಕಾ ಪ್ರಜೆಗಳ ಬಂಧನ ಪ್ರಕರಣವು ದೇಶದ ಆಂತರಿಕ ಭದ್ರತೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಕೇಂದ್ರದ ಗೃಹ ಇಲಾಖೆ, ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಮೂಲಕ ತನಿಖೆ ನಡೆಸಬೇಕೆಂದು ಆದೇಶಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಈ ಪ್ರಕರಣದ ಕಡತವನ್ನು ಡಿಎಸ್ಪಿ ರ‍್ಯಾಂಕ್ ನ ಅಧಿಕಾರಿಯೋರ್ವರು ಬಂದು, ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತನಿಖೆಗೆ ಪೂರಕವಾಗಿ ಸ್ಥಳೀಯವಾಗಿ ಅಗತ್ಯ ಅಧಿಕಾರಿಗಳು, ಸಿಬ್ಬಂದಿ ವಾಹನಗಳು ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಮಾಡಬೇಕೆಂದು ನಮ್ಮ ಕೇಂದ್ರ ಕಚೇರಿಯಿಂದ...
Category: Law and Order
Post date: 24-07-2121
City: Udupi, Mangalore

Public News
PublicNext--553387--node-nid
Subject ಸ್ಟಿಂಗ್ ಆಪರೇಷನ್‌ನಲ್ಲಿ ಹೊರಬಿದ್ದ ಸಚಿವೆ ಜೊಲ್ಲೆ 'ಮೊಟ್ಟೆ ಡೀಲ್'- ಕಾಂಗ್ರೆಸ್‌, ಜೆಡಿಎಸ್ ವಾಗ್ದಾಳಿ

ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಸ್ಟಿಂಗ್ ಆಪರೇಷನ್‌ ಕಾರ್ಯಾಚರಣೆಯಲ್ಲಿ ಸಚಿವೆ 'ಮಾತೃಪೂರ್ಣ ಯೋಜನೆ' ಅಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಲಂಚದ ಆಮಿಷವೊಡ್ಡಿದ ಅಂಶ ಹೊರದಿದ್ದಿದೆ.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಬಾಣಂತಿಯರಿಗೆ ಟೆಂಡರ್ ಮೂಲಕ ಮೊಟ್ಟೆ ವಿತರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿತ್ತು. ಈ ಟೆಂಡರ್ ಪಡೆಯುವವರು ಪ್ರತಿ ತಿಂಗಳು ಸಚಿವೆ ಶಶಿಕಲಾ ಜೊಲ್ಲೆಗೆ ತಿಂಗಳಿಗೆ ಒಂದು ಕೋಟಿ ನೀಡಬೇಕು ಎನ್ನುವ ಸಂಭಾಷಣೆ ಸ್ಟಿಂಗ್ ಆಪರೇಷನ್‌ನಲ್ಲಿ ರೆಕಾರ್ಡ್ ಆಗಿದೆ. ಟೆಂಡರ್...
Category: Politics
Post date: 24-07-2121

Pages