Public News

News Subject: 
ಜೂ.17ಕ್ಕೆ ಅರುಣ್ ಸಿಂಗ್ ರನ್ನು ಶಾಸಕರು ಭೇಟಿ ಮಾಡ್ತೇವೆ: ರೇಣುಕಾಚಾರ್ಯ
Category: 
Politics
Body: 

ದಾವಣಗೆರೆ: ನಾಯಕತ್ವ ಬದಲಾವಣೆ ಇಲ್ಲ ಎಂಬುದಾಗಿ ವರಿಷ್ಠರೇ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರಕ್ಕೆ ತಂದ ಯಡಿಯೂರಪ್ಪರ ಶ್ರಮ ಹೇಳಬೇಕಾಗಿಲ್ಲ. ಅದು ರಾಜ್ಯದ ಜನರಿಗೆ ಗೊತ್ತಿದೆ. ಅರುಣ್ ಸಿಂಗ್ ರಿಗೆ ಕರೆ ಮಾಡಿದಾಗ ಅವರ
ಆಪ್ತ ಕಾರ್ಯದರ್ಶಿಗೆ ಸ್ವೀಕರಿಸಿದರು. ಆಗ ಹೊನ್ನಾಳಿಯಲ್ಲಿ ಇದ್ದೇನೆ. ಯೋಗಾಸನ, ಪ್ರಾಣಾಯಾಮ, ಕ್ರಿಕೆಟ್‌ ಸೇರಿದಂತೆ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದೇನೆ. ಕೊರೊನಾ ವೈರಸ್ ಜೊತೆ ಬದುಕುತ್ತಿದ್ದೇನೆ. ಜೂನ್ 17ಕ್ಕೆ ಭೇಟಿಗೆ ಅವಕಾಶ ಕೋರಿದ್ದು, ಇದಕ್ಕೆ ಒಪ್ಪಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆಯೂ ಅರುಣ್ ಸಿಂಗ್ ಅವರಲ್ಲಿ ಒತ್ತಾಯಿಸುವುದಾಗಿ ಹೇಳಿದರು.

ಬಿಜಾಪುರದ ಶಾಸಕರೊಬ್ಬರು ನನಗೆ ಸೇರಿದಂತೆ ಹಲವು ಶಾಸಕರಿಗೆ ಕರೆ ಮಾಡಿ ನಾನೇ ಮುಖ್ಯಮಂತ್ರಿ, ಸಹಕಾರ ಕೊಡಿ ಎಂದೆಲ್ಲಾ ಹೇಳುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಹೇಳಿದ ಮೇಲೂ ಭಿನ್ನಮತೀಯ ಚಟುವಟಿಕೆ ನಡೆಸುವುದು ಸರಿಯಲ್ಲ‌. ಯಡಿಯೂರಪ್ಪರ ಪರ ನಾವೆಲ್ಲರೂ ಇದ್ದೇವೆ. ಯಾರೋ ಒಂದಿಬ್ಬರ ಆಟ ನಡೆಯದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವೇ ಮುಂದಿನ ಸ್ವಯಂಘೋಷಿತ ಮುಖ್ಯಮಂತ್ರಿ ಎಂಬಂತೆ ಕೆಲವರು ವೈಭವೀಕರಿಸಿಕೊಳ್ಳುತ್ತಿದ್ದಾರೆ. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವರು ದೆಹಲಿಗೆ ಹೋಗಿ ಭೇಟಿ ಮಾಡಿದ್ದೇ ದೊಡ್ದ ಸುದ್ದಿ ಮಾಡಿಸುತ್ತಿದ್ದಾರೆ. ಜೂನ್ 17ರಂದು ನಾನು ಸೇರಿದಂತೆ ಶಾಸಕರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ ಎಂದು ರೇಣುಕಾಚಾರ್ಯ ಹೇಳು ವ ಮೂಲಕ ಅರವಿಂದ್ ಬೆಲ್ಲದ್ ಗೆ ಟಾಂಗ್ ನೀಡಿದ್ದಾರೆ.

Reach Count: 
40542