Public News

News Subject: 
ಈ ದೇಶದಲ್ಲಿ ಶೇ. 5.6 ಜನರಿಗಿದೆ ಏಡ್ಸ್ : ಏಡ್ಸ್ ಹೆಚ್ಚಳಕ್ಕೆ ಕಾರಣ ಗೊತ್ತೆ?..
Upload Image: 
PublicNext--514942--node-nid
Category: 
International
Body: 

ಕಂಪಾಲಾ : ಟ್ಯಾಕ್ಸಿ ರೈಡ್ ಮಾಡಿ ದುಡ್ಡಿನ ಬದಲು ಸೆಕ್ಸ್ ಆಫರ್ ಕೊಡುವ ಮಹಿಳೆಯರಿಂದಾಗಿ ಈ ದೇಶದಲ್ಲಿ 5.6 ಜನರಿಗೆ ಏಡ್ಸ್ ವಕ್ಕರಿಸಿದೆ. ಟ್ಯಾಕ್ಸಿಗಳಲ್ಲಿ ರೈಡ್ ಬಳಿಕ ಹಣವಿಲ್ಲ ಎಂದರೆ ಟ್ಯಾಕ್ಸಿ ಡ್ರೈವರ್ ಜತೆಯೇ ಸೆಕ್ಸ್ ಮಾಡಿ ಲೆಕ್ಕ ಸರಿ ಮಾಡಿಬಿಡುತ್ತಾರಂತೆ ಈ ಮಹಿಳೆಯರು. ಈ ರೀತಿ ಹೇಳಿರುವುದು ನಾವಲ್ಲ. ಉಗಾಂಡದ ಮ್ಯಾಕೆರೆರೆ ಯೂನಿವರ್ಸಿಟಿ ಕಾಲೇಜ್ ಆಫ್ ಎಜುಕೇಶನ್ ಅಂಡ್ ಎಕ್ಸ್ ಟರ್ನಲ್ ಸ್ಟಡೀಸ್. ಉಗಾಂಡದಲ್ಲಿ ಟ್ಯಾಕ್ಸಿ ಡ್ರೈವರ್ ಕೆಲಸ ಮಾಡುವವರಿಗೆ ಬೋಡಾ ಬೋಡಾ ಎಂದು ಕರೆಯಲಾಗುತ್ತದೆ. ಬಹುತೇಕ ಯುವಕರೇ ತುಂಬಿರುವ ಈ ಕೆಲಸದಲ್ಲಿ ಸೆಕ್ಸ್ ಅತ್ಯಂತ ಸಾಮಾನ್ಯ ವಿಚಾರವಂತೆ.

ಹಣ ಇಲ್ಲದ ಮಹಿಳೆಯರು ಯಾವುದೇ ಸಂಕೋಚ ಇಲ್ಲದೆ ಸೆಕ್ಸ್ ಆಯ್ಕೆ ಕೊಡುತ್ತಾರಂತೆ. ಇನ್ನು ಕೆಲ ಮಹಿಳೆಯರು ಹಣ ಇದ್ದರೂ ಸೆಕ್ಸ್ ಆಫರ್ ಕೊಟ್ಟು ದುಡ್ಡು ಉಳಿಸುತ್ತಾರಂತೆ. ಶೇ. 65.7 ಡ್ರೈವರ್ ಗಳು ತಮ್ಮ ಪತ್ನಿಯಲ್ಲದೆ ಬೇರೆಯವರೊಂದಿಗೂ ಸೆಕ್ಸ್ ಮಾಡಿದ್ದಾಗಿ ತಿಳಿಸಿದ್ದಾರೆ. ಶೇ. 23 ಡ್ರೈವರ್ ಗಳು ಒಂದಕ್ಕಿಂತ ಹೆಚ್ಚು ಲವರ್ ಇರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಹಾಗೆಯೇ ಇವರೆಲ್ಲರಲ್ಲಿ ಶೇ. 57.1 ಡ್ರೈವರ್ ಗಳು ತಾವು ಕಾಂಡೋಮ್ ಬಳಕೆ ಮಾಡಿಲ್ಲವೆಂದು ಹೇಳಿದ್ದಾರೆ ಎಂದು ವಿವಿ ತನ್ನ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ ಈಗಾಗಲೇ ಶೇ. 5.6 ಮಂದಿಗೆ ಏಡ್ಸ್ ಕಾಯಿಲೆಯಿದೆ. ಎಂದು ಏಡ್ಸ್ ಆಯೋಗದ ಮುಖ್ಯಸ್ಥ ಡೇನಿಯಲ್ ಬೈಬಕಾಮಾ ಅವರು ತಿಳಿಸಿದ್ದಾರೆ.

Reach Count: 
22740