Kshetra Samachara

Local News Subject: 
ಪಡುಪಣಂಬೂರು: ಲಸಿಕೆ ಪಡೆದುಕೊಂಡು ಜೀವ ರಕ್ಷಣೆಗೆ ಮುಂದಾಗಿ: ಉಮಾನಾಥ ಕೋಟ್ಯಾನ್
City: 
Udupi
Mangalore
Category: 
Health & Fitness
Body: 

ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾ ಶಿಭಿರ ಕಾರ್ಯಕ್ರಮ ಸಭಾಂಗಣದಲ್ಲಿ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕೋರೋನ ಲಸಿಕೆ ಮುಖಾಂತರ ಜೀವವನ್ನು ರಕ್ಷಿಸಿಕೊಳ್ಳಲು ಎಲ್ಲರೂ ಮುಂದಾಗಬೇಕಾಗಿದೆ.

ಕೋರೋನ ಲಸಿಕೆ ಬಗ್ಗೆ ಯಾರು ಗೊಂದಲ ಪಡಬೇಕಾದ ಅಗತ್ಯವಿಲ್ಲ ಜೂ 21ರ ಬಳಿಕ ದೇಶವಾಸಿಗಳಿಗೆ ಕಡ್ಡಾಯ ಕೊರೋನಾ ಲಸಿಕೆ ವಿತರಿಸಬೇಕು ಎಂದು ಪ್ರಧಾನ ಮಂತ್ರಿಗಳು ಆದೇಶ ನೀಡಿದ್ದಾರೆ ಎಂದರು.

ಈ ಸಂದರ್ಭ ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಮಾಜಿ ಸದಸ್ಯ ಜೀವನ್ ಪ್ರಕಾಶ್, ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು,ಹರಿಪ್ರಸಾದ್, ಹೇಮನಾಥ್ ತೋಕೂರು, ದಿನೇಶ್ ಶೆಟ್ಟಿ, ಜ್ಯೋತಿ ,ತುಳಸಿ, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಬಿಜೆಪಿ ನಾಯಕ ಈಶ್ವರ ಕಟೀಲ್, ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿತ್ರ, ಪಂಚಾಯಿತಿ ಪಿಡಿಓ ಅನಿತಾ ಕ್ಯಾಥರೀನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ನಿರ್ದೇಶಕ ಶ್ಯಾಮ್ ಪಡುಪಣಂಬೂರು ಅಂಗನವಾಡಿ ಕಾರ್ಯಕರ್ತೆ ಪ್ರೇಮಲತ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಲೋಕನಾಥ ಭಂಡಾರಿ ನಿರೂಪಿಸಿದರು.

ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಗೆ ಕೊರೋನಾ ಲಸಿಕೆ ವಿತರಿಸಲಾಯಿತು.

Reach Count: 
13363