ER NEWS

News Subject: 
11 ತಿಂಗಳಿಗೆ ರೆಂಟ್ ಅಗ್ರಿಮೆಂಟ್ ಮಾಡಲು ಕಾರಣವೇನು ಗೊತ್ತಾ?
Upload Image: 
Body: 

ಬಾಡಿಗೆ ಮನೆ ಮಾಡಲು ನೀವು ರೆಂಟಲ್ ಅಗ್ರಿಮೆಂಟ್ ಗೆ ಸಹಿ ಹಾಕಲೇಬೇಕು. ಆದ್ರೆ ಸಾಮಾನ್ಯವಾಗಿ ಮನೆ ಮಾಲೀಕರೆಲ್ಲ 11 ತಿಂಗಳ ಒಪ್ಪಂದ ಮಾಡಿಕೊಳ್ತಾರೆ. ಕೇವಲ 11 ತಿಂಗಳ ರೆಂಟಲ್ ಅಗ್ರಿಮೆಂಟ್ ಮಾಡಿಕೊಳ್ಳೋದು ಯಾಕೆ ಅನ್ನೋದು ಮನೆ ಮಾಲೀಕರಿಗಾಗ್ಲಿ, ಬಾಡಿಗೆದಾರರಿಗಾಗ್ಲಿ ಅಥವಾ ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೂ ಗೊತ್ತಿಲ್ಲ. ಮನೆ ಮಾಲೀಕ ಹಾಗೂ ಬಾಡಿಗೆದಾರನ ನಡುವಣ ಒಪ್ಪಂದ ಇದು. ಅಗ್ರಿಮೆಂಟ್ ನಲ್ಲಿ ಕೆಲವೊಂದು ಟರ್ಮ್ಸ್ & ಕಂಡಿಷನ್ಸ್ ಇರುತ್ತವೆ. ಪ್ರಾಪರ್ಟಿ ಅಡ್ರೆಸ್, ಟೈಪ್, ಸೈಜ್ ಗಳ ಬಗ್ಗೆ ಮಾಹಿತಿ ಇರುತ್ತದೆ. ತಿಂಗಳ ಬಾಡಿಗೆ, ಸೆಕ್ಯೂರಿಟಿ ಡೆಪಾಸಿಟ್ ವಿವರವೂ ಇರುತ್ತದೆ.

ಅಷ್ಟಕ್ಕೂ ರೆಂಟಲ್ ಅಗ್ರಿಮೆಂಟ್ ಅನ್ನು ಕೇವಲ 11 ತಿಂಗಳುಗಳ ಅವಧಿಗೆ ಮಾಡೋದು ಯಾಕೆ ಗೊತ್ತಾ? ಸ್ಟಾಂಪ್ ಡ್ಯೂಟಿ ಮತ್ತು ಇತರ ಶುಲ್ಕಗಳಿಂದ ತಪ್ಪಿಸಿಕೊಳ್ಳಲು. ರಿಜಿಸ್ಟ್ರೇಶನ್ ಆಯಕ್ಟ್ 1908 ಪ್ರಕಾರ ಲೀಸ್ ಅವಧಿ 12 ತಿಂಗಳುಗಳಿಗಿಂತ ಹೆಚ್ಚಾಗಿದ್ದಲ್ಲಿ ಲೀಸ್ ಅಗ್ರಿಮೆಂಟ್ ರಿಜಿಸ್ಟ್ರೇಶನ್ ಮಾಡಿಸುವುದು ಕಡ್ಡಾಯ. ನೋಂದಣಿ ಮಾಡಿಸಲು ಶುಲ್ಕ ಹಾಗೂ ಸ್ಟಾಂಪ್ ಡ್ಯೂಟಿ ಪಾವತಿಸಬೇಕು. ಬೇರೆ ಬೇರೆ ಅವಧಿಗೆ ಬೇರೆ ಬೇರೆ ಪ್ರಮಾಣದ ಶುಲ್ಕವಿದೆ. ಜೊತೆಗೆ 1100 ರೂ. ಹೆಚ್ಚುವರಿಯಾಗಿ ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ. ಸೆಕ್ಯೂರಿಟಿ ಡೆಪಾಸಿಟ್ ಮೇಲೂ 100 ರೂ. ಶುಲ್ಕ ಪಾವತಿಸಬೇಕು.

ಇದರಿಂದ ತಪ್ಪಿಸಿಕೊಳ್ಳಲು ಮನೆ ಮಾಲೀಕರು ಮತ್ತು ಬಾಡಿಗೆದಾರರು ರೆಂಟಲ್ ಅಗ್ರಿಮೆಂಟ್ ರಿಜಿಸ್ಟ್ರೇಶನ್ ಮಾಡಿಸುವುದಿಲ್ಲ. ಕೇವಲ 11 ತಿಂಗಳ ಅವಧಿಗೆ ರೆಂಟಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ.

Reach Count: 
1