ER NEWS

News Subject: 
ರಾಹುಲ್ ಒಬ್ಬ ಅಪ್ರಬುದ್ಧ ರಾಜಕಾರಣಿ; ಜಗದೀಶ್ ಶೆಟ್ಟರ್
Upload Image: 
Body: 

ಯಾವ ಶೌಚಾಲಯಕ್ಕೆ ಹೋಗಬೇಕು ಅನ್ನೋದೇ ಗೊತ್ತಿಲ್ಲದ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಪಹಾಸ್ಯ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ನಡೆದ ಸುದ್ದ್ದಿಗೋಷ್ಠಿಯಲ್ಲಿ ಮಾತನಾಡಿದರು ಇದೇ ವೇಳೆ ಅವರು ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ಅಂತಹ ರಾಜಕಾರಣಿಗೆ ಕಾಂಗ್ರೆಸ್ ಕಿರೀಟ ನೀಡಲು ಹೊರಟಿದೆ. ಇದರಿಂದ ಕಾಂಗ್ರೆಸ್ ಅಂತ್ಯ ಪ್ರಾರಂಭವಾಗಿದೆ ಎಂದು ಶೆಟ್ಟರ್ ಕುಹಕವಾಡಿದರು.

ರೋಷನ್ ಬೇಗ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ರೋಷನ್ ಬೇಗ್ ಹೇಳಿಕೆಯಿಂದ ಕಾಂಗ್ರೆಸ್ ಸಂಸ್ಕೃತಿ ಗೊತ್ತಾಗುತ್ತದೆ. ತೆಲಗಿಯ ಚಾಪಾ ಕಾಗದ ಹಗರಣದಲ್ಲಿ ರೋಷನ್ ಬೇಗ್ ಸಹೋದರ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಬೇಗ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಎಂದು ಒತ್ತಾಯಿಸಿದರು

Reach Count: 
1