ER NEWS

News Subject: 
ಮಳೆಗೆ ಕೊಚ್ಚಿ ಹೋಗಿದ್ದ ಯುವತಿ ಪುಷ್ಪಾ ಮೃತದೇಹ ಪತ್ತೆ
Upload Image: 
Body: 

ಭಾರೀ ಮಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಪುಷ್ಪಾ ಮೃತದೇಹ ಕುಂಬಳಗೋಡು ಸಮೀಪದ ರಾಜಕಾಲುವೆಯಲ್ಲಿ ರವಿವಾರ ಪತ್ತೆಯಾಗಿದೆ. ಸತತ ಕಾರ್ಯಾಚರಣೆಯ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪುಷ್ಪ ಶವವನ್ನು ಪತ್ತೆ ಹಚ್ಚಿ ನೀರಿನಿಂದ ಮೇಲಕ್ಕೆತ್ತಿದ್ದಾರೆ.ಆದರೆ ತಾಯಿ ನಿಂಗವ್ವ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಹೊರ ಬಂದಿದ್ದ ನಿಂಗವ್ವ (57) ಹಾಗೂ ಅವರ ಮಗಳು ಪುಷ್ಪಾ (22) ನೀರಿನಲ್ಲಿ ಮುಳುಗಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದರು. ಇದೇ ವೇಳೆ. ನೀರುಗಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಸವೇಶ್ವರ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ವಾಸುದೇವ್ ಅವರ ಮೃತದೇಹ ನಿನ್ನೆ ಬೆಳಗ್ಗೆ ಪತ್ತೆಯಾಗಿತ್ತು .

Reach Count: 
1