Kshetra Samachara

Local News Subject: 
ಕರ್ವಾಲು ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ತಜ್ಞರು: ಜೈವಿಕ ತ್ಯಾಜ್ಯದಿಂದ ವಿದ್ಯುತ್ ಸಾಧ್ಯತೆ
City: 
Udupi
Mangalore
Upload Image: 
PublicNext-553473-648352-Udupi-Mangalore-Infrastructure-node
Category: 
Infrastructure
Body: 

ಕರ್ವಾಲು: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮಂತ್ರಾಲಯದ ಸೂಚನೆಯನ್ವಯ ಉಡುಪಿಯ ನೀಲಾವರ ಗೋಶಾಲೆಗೆ ಭೇಟಿ ನೀಡಲು ಬಂದಿದ್ದ ತಜ್ಞರು ಬುಧವಾರ ಉಡುಪಿ ನಗರಸಭೆಗೆ ಭೇಟಿ ನೀಡಿದರು.

ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪ ಸೂರ್ ಅವರು ಶಾಸಕ ಕೆ.ರಘುಪತಿ ಭಟ್, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಆಯುಕ್ತ ಡಾ ಉದಯ ಶೆಟ್ಟಿ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಹಾಗೂ ಪರಿಸರ ಇಂಜಿನಿಯರ್ ಸ್ನೇಹಾ ಕೆ ಎಸ್ ಅವರೊಡನೆ ಸಮಾಲೋಚನೆ ನಡೆಸಿದರು.

ಉಡುಪಿ ನಗರದಲ್ಲಿ ನಿತ್ಯ ಲಭಿಸುವ ಜೈವಿಕ ತ್ಯಾಜ್ಯ ಬಳಸಿ ವಿದ್ಯುತ್ ತಯಾರಿ ಸಾಧ್ಯವಿದ್ದು ಕೇಂದ್ರ ಸರ್ಕಾರವೂ ಇದಕ್ಕೆ ವಿಶೇಷ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು. ಶಾಸಕರ ಸೂಚನೆಯಂತೆ ಅಲೆವೂರು ಕರ್ವಾಲಿನ ತ್ಯಾಜ್ಯ ಸಂಸ್ಕರಣ ಘಟಕಕ್ಕೂ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಲ್ಲಿ ಸ್ಥೂಲ ಮಾಹಿತಿ ಪಡೆದರು.

Reach Count: 
1869
Show Detail Screen Advertisement: 
Yes