Kshetra Samachara

Local News Subject: 
ಹುಬ್ಬಳ್ಳಿ : ಬರಿ ಆಫಿಸಿನ್ಯಾಗ್ ಕೂಡ್ರ ಬ್ಯಾಡ್ರಿ ಠಾಣೆಗಳಿಗೆ ಹೋಗಿ ಚೆಕ್ ಮಾಡ್ರಿ ಅಂದ್ರ ಎಲ್ಲಾ ಗೊತ್ತಾಗ್ತದ ...!
City: 
Hubballi-Dharwad
Category: 
Politics
Law and Order
Body: 

ಹುಬ್ಬಳ್ಳಿ: ಪೊಲೀಸ್ ಕಮೀಷನರ್ ಹಾಗೂ ಹಿರಿಯ ಅಧಿಕಾರಿಗಳು ಫೀಲ್ಡ್ ಗೆ ಇಳಿದು ಕೆಲಸ ಮಾಡಬೇಕು.‌ ಕಚೇಯಲ್ಲಿ ಕುಳಿತು ಕೆಲಸ ಮಾಡುವುದು ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ವಾರ್ನಿಂಗ್ ನೀಡಿದರು.

ನಗರದಲ್ಲಿಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,
ಪೊಲೀಸ್ ಕಾರ್ಯದಕ್ಷತೆ ಬಗ್ಗೆ ಪಾಠ ಮಾಡಿದರು. ಕಚೇರಿಯಲ್ಲಿ ಕುಳಿತು ಆಡಳಿತ ಕೆಲಸ ಮಾಡೋದಷ್ಟೇ ಪೊಲೀಸರ ಕರ್ತವ್ಯವಲ್ಲ. ಫೀಲ್ಡ್ ಗೆ ಇಳಿದು ಕಮಿಷನರ್, ಡಿಸಿಪಿಗಳು ಕೆಲಸ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.

ಕೆಳಹಂತದ ಕಾರ್ಯವೈಖರಿ ತಿಳಿಯಲು- ಹಿರಿಯ ಅಧಿಕಾರಿ ಠಾಣೆಗಳಿಗೆ ಹೋಗಿ ಕುಳಿತುಕೊಳ್ಳಬೇಕು.ಹುಬ್ಬಳ್ಳಿಯ ಧಾರವಾಡ ಇತ್ತೀಚೆಗೆ ಕ್ರೈಂ ಹೆಚ್ಚಾಗುತ್ತಿದೆ.ಐದಾರು ಠಾಣೆಗಳ ಕಾರ್ಯವೈಖರಿ ಬದಲಾಗಬೇಕಿದೆ.ಹುಬ್ಬಳ್ಳಿ ಧಾರವಾಡ ಹೆಸರಿಗೆ ಮಸಿ ಬಳಿಯುವ ಕೆಲಸ ಕೆಲ‌ ಕಿಡಿಗೇಡಿಗಳಿದ್ದಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಲ್ಲ. 17 ಸಾವಿರ ಪೊಲೀಸ್ ಹಾಗು ಪಿಎಸ್ ಐ ನೇಮಕಾತಿ ನಡೆಯುತ್ತಿದೆ. ಎನ್.ಡಿಎ( ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯಲ್ಲಿ ರಾಜ್ಯದ ಡಿವೈಎಸ್ಪಿ ರ‌್ಯಾಂಕ್ ಅಧಿಕಾರಿಗಳ ತರಬೇತಿ ನೀಡಲು ನಾವು ಮುಂದಾಗಿದ್ದೇವೆ ಎಂದರು.

ನನಗೆ ಹುಬ್ಬಳ್ಳಿಯ ಪ್ರತಿ ಗಲ್ಲಿ ಗಲ್ಲಿಯೂ ಗೊತ್ತು. ಎಲ್ಲರೂ ಸೇರಿ‌ ಒಳ್ಳೆಯ ಕೆಲಸ ಮಾಡೋಣ. 60 ತಿಂಗಳಲ್ಲಿ 59 ತಿಂಗಳು ಅಭಿವೃದ್ಧಿ ಮಾಡೋಣ.ಒಂದು ತಿಂಗಳು ಮಾತ್ರ ರಾಜಕಾರಣ ಮಾಡೋಣ. ಗೋಡಾ ಹೈ- ಮೈದಾನ ಬೀ ಹೈ ಎಂದು ಹಿಂದಿ ಡೈಲಾಗ್ ಹೊಡೆದು ಅಭಿವೃದ್ದಿಗೆ ಮಹತ್ವ ನೀಡೋಣ ಎಂದರು.

Reach Count: 
36750
Show Detail Screen Advertisement: 
Yes