Public News

News Subject: 
ಜರ್ಮನಿ ಚುನಾವಣೆ: ಆಂಜೆಲಾ ಮರ್ಕೆಲ್ ಪಕ್ಷಕ್ಕೆ ಕಡಿಮೆ ಅಂತರದಲ್ಲಿ ಸೋಲು
Upload Image: 
PublicNext--617552--node-nid
Category: 
Politics
International
Body: 

ಬರ್ಲಿನ್: ಜರ್ಮನಿಯಲ್ಲಿ ರವಿವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷ ಕಡಿಮೆ ಅಂತರದಿಂದ ವಿಜಯ ಸಾಧಿಸಿದೆ. ಈ ಮೂಲಕ 16 ವರ್ಷಗಳಿಂದ ಅಧಿಕಾರದಲ್ಲಿದ್ದ ಆಂಜೆಲಾ ಮರ್ಕೆಲ್ ನೇತೃತ್ವದ ಕನ್ಸರ್ವೇಟಿವ್ ಪಕ್ಷದ ಆಡಳಿತದ ಅವಧಿಯನ್ನು ಅಂತ್ಯಗೊಳಿಸಿದೆ.

ಕನ್ಸರ್ವೇಟಿವ್ ಪಕ್ಷಕ್ಕೆ ಶೇ 24.5 ಮತಗಳು ದೊರಕಿದ್ದರೆ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷಕ್ಕೆ ಶೇ 26ರಷ್ಟು ಮತಗಳು ಒಲಿದಿವೆ. ಈ ನಡುವೆ ಬಹುಮತದ ಸಮೀಪದಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಸಿಎಸ್ ಯು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಒಂದು ವೇಳೆ ಮೈತ್ರಿ ಸಾಧ್ಯವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷ ಸರ್ಕಾರದ ನೇತೃತ್ವ ವಹಿಸಿದಲ್ಲಿ ಅದರ ನೇತೃತ್ವವನ್ನು ಮರ್ಕೆಲ್ ಬದಲಾಗಿ ಓಲಫ್ ಶೋಲ್ಝ್ ವಹಿಸಲಿದ್ದಾರೆ.

Reach Count: 
31047
Show Detail Screen Advertisement: 
Yes