Public News

News Subject: 
ರೈತ ಪ್ರತಿಭಟನೆ ಅಸಲಿ ಮುಖ ಬಹಿರಂಗ.? ಕೇಂದ್ರದ ವಿರುದ್ಧ ಹರಿಹಾಯ್ದ ರಾಕೇಶ್ ಟಿಕಾಯತ್
Upload Image: 
PublicNext--553431--node-nid
Category: 
Politics
Body: 

ನವದೆಹಲಿ: ರೈತ ಪ್ರತಿಭಟನೆ ಅಸಲಿ ಮುಖ ಬಹಿರಂಗವಾದ ಹಿನ್ನೆಲೆಯಲ್ಲಿ ಮುಜುಗರಕ್ಕೆ ಒಳಗಾದ ರೈತ ಮುಖಂಡ ರಾಕೇಶ್ ಟಿಕಾಯತ್ ಇದೀಗ ಕೇಂದ್ರದ ಮೇಲೆ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ರೈತ ಸಂಘಟನೆಗಳ ಪ್ರತಿಭಟನೆ ಅಸಲಿಯತ್ತನ್ನು ಪಂಜಾಬ್ ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷ ಬಹಿರಂಗ ಪಡಿಸಿದ್ದರು. ಇದರಿಂದಾಗಿ ಭಾರತೀಯ ಕಿಸಾನ್ ಯೂನಿಯನ್ ಸಂಘದ ಮುಖಂಡ ರಾಕೇಶ್ ಟಿಕಾಯತ್ ಅವರು, "ರೈತರಿಗೆ ಉಳುಮೆ ಮಾತ್ರವಲ್ಲ, ಪಾಠ ಕಲಿಸಲು ತಿಳಿದಿದೆ" ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

"ಕಿವುಡ ಹಾಗೂ ಮೂಕ ಸರ್ಕಾರವನ್ನು ರೈತ ಪ್ರತಿಭಟನೆ ಮೂಲಕ ಜಾಗೃತಗೊಳಿಸಲಾಗಿದೆ. ಆದರೆ ಪ್ರತಿಭಟನೆ ಆರಂಭಗೊಂಡು ಸರಿಸುಮಾರು ಒಂದು ವರ್ಷಗಳಾಗುತ್ತಾ ಬಂದಿದೆ. ಆದರೆ ನಮ್ಮನ್ನು ನಿರ್ಲಕ್ಷಿಸುತ್ತಾ ಬರುತ್ತಿರುವ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಲು ನಮಗೆ ತಿಳಿದೆ. ಸಂಸತ್ ನಡೆಸಲು ರೈತರಿಗೆ ಸಾಮರ್ಥ್ಯವಿದೆ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Reach Count: 
17349
Show Detail Screen Advertisement: 
Yes