Kshetra Samachara

Local News Subject: 
ಧಾರವಾಡ : ಸಂಕಷ್ಟದಲ್ಲಿ ಸಿಲುಕಿದ ವಿಶೇಷಚೇತನ ಮಹಿಳೆ ರಕ್ಷಿಸಿದ ಯುವಕರು
City: 
Hubballi-Dharwad
Video Thumbnail: 
PublicNext--553397--node-nid
Category: 
Human Stories
Body: 

ಧಾರವಾಡ : ಜಿಲ್ಲೆಯಾದ್ಯಂತ ವರುಣನ ಆರ್ಭಟ ಹಿನ್ನೆಲೆಯಲ್ಲಿ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಅಳ್ನಾವರದ ಹುಲಿಕೆರೆ ಬಸಿದು ಅಪಾರ ಪ್ರಮಾಣದ ನೀರು ಸೋರಿಕೆಯಾದ ಹಿನ್ನೆಲೆ ಟಿಳಕ ನಗರ ಜಲಾವೃತಗೊಂಡಿದೆ.ಆ ಪ್ರದೇಶದಲ್ಲಿ ವಾಸವಿದ್ದ ವಿಶೇಷಚೇತನ ಮಹಿಳೆ ಮನೆಯಿಂದ ಹೊರ ಬರಲಾಗದೆ ಪರದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಟಿಳಕ ನಗರದ ಬಸಮ್ಮ ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಾರಿ ಮಳೆಯಿಂದಾಗಿ ಆ ಮನೆಯೂ ಜಲಾವೃತವಾಗಿತ್ತು. ಈ ಹಿನ್ನೆಲೆ ಸ್ಥಳೀಯರು ಆಕೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

Reach Count: 
46185
Show Detail Screen Advertisement: 
Yes