Public News

News Subject: 
ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್​ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ- ಕಾರ್ಯಕರ್ತರು ಪೊಲೀಸ್ ವಶಕ್ಕೆ
Video Thumbnail: 
PublicNext--553350--node-nid
Category: 
Politics
Body: 

ಬೆಂಗಳೂರು: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್​ ಪ್ರಕರಣದ ವಿಚಾರವಾಗಿ ಇಂದು ಕಾಂಗ್ರೆಸ್ ಮಹಿಳಾ ವಿಭಾಗ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಮೊಟ್ಟೆ ಟ್ರೇ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು, "ದಿಕ್ಕಾರ, ದಿಕ್ಕಾರ. ಶಶಿಕಲಾ ಜೊಲ್ಲೆ ಅವರ ರಾಜೀನಾಮೆ ಪಡೆಯಲೇಬೇಕು. ಡೌನ್ ಡೌನ್‌ ಬಿಜೆಪಿ. ಸರ್ಕಾರವಂತೆ ಸರ್ಕಾರ ಅವರ ಅಪ್ಪನದಂತೆ ಸರ್ಕಾರ" ಎಂದು ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದರು. ಇತ್ತ ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್​ನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Reach Count: 
61941
Show Detail Screen Advertisement: 
Yes