Kshetra Samachara

Local News Subject: 
ಉಡುಪಿ : ಪ್ರಸಿದ್ಧ ಮಲ್ಪೆ ಬೀಚ್ ಗೆ ಪ್ರವಾಸಿಗರ ಲಗ್ಗೆ : ಮೋಜು, ಮಸ್ತಿ
City: 
Udupi
Mangalore
Video Thumbnail: 
PublicNext--553220--node-nid
Category: 
Nature
Body: 

ವರದಿ: ರಹೀಂ ಉಜಿರೆ

ಮಲ್ಪೆ: ಉಡುಪಿಯ ಪ್ರಸಿದ್ಧ ಮಲ್ಪೆ ಬೀಚ್ ಗೆ ಇಂದು ರಾಜ್ಯದ ಮೂಲೆ ಮೂಲೆಯ ಪ್ರವಾಸಿಗರು ಅಕ್ಷರಶಃ
ಲಗ್ಗೆ ಇಟ್ಟಿದ್ದಾರೆ.ಎರಡನೇ ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಮಲ್ಪೆ ಬೀಚ್ ಇಂದು ಪ್ರವಾಸಿಗರಿಂದ ತುಂಬಿತ್ತು. ಮನೆಯಲ್ಲೇ ಕುಳಿತ ಜನ ಒಂದಷ್ಟು ರಿಲ್ಯಾಕ್ಸ್ ಆಗಲು ಕಡಲ ಅಲೆಗಳ ಜೊತೆ ಸರಸವಾಡಿದರು.

ಕಳೆದ ಕೆಲವು ತಿಂಗಳುಗಳಿಂದ ಖಾಲಿ ಬಿದ್ದಿದ್ದ ಉಡುಪಿಯ ಪ್ರಸಿದ್ಧ ಮಲ್ಪೆ ಬೀಚ್ ಇಂದು ಪ್ರವಾಸಿಗರಿಂದ ತುಂಬಿದೆ.ಬೆಳಗ್ಗಿನಿಂದಲೇ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಪ್ರವಾಸಿಗರು ಕಡಲ ಅಲೆಗಳ ಜೊತೆ ಮನಸೋ ಇಚ್ಛೆ ಆಟವಾಡಿದರು. ಸಂಸಾರಸ್ಥರು, ಜೋಡಿಗಳು ಮತ್ತು ಮಕ್ಕಳು ಬೀಚಿನಲ್ಲಿ ಸಖತ್ ಎಂಜಾಯ್ ಮಾಡಿದರು. ಹಾಗೆ ನೋಡಿದರೆ ಪ್ರವಾಸಿಗರಿಗೆ ಸಮುದ್ರಕ್ಕಿಳಿಯಲು ಇನ್ನೂ ಪೂರ್ಣಪ್ರಮಾಣದ ಅನುಮತಿ ಇಲ್ಲ. ಆದರೂ ಕೂಡ ದೂರದೂರುಗಳಿಂದ ಬಂದ ಪ್ರವಾಸಿಗರನ್ನು ನಿಯಂತ್ರಿಸಲು ಸ್ಥಳೀಯ ಆಡಳಿತಕ್ಕೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಸ್ ಗಳನ್ನು ನೇಮಿಸಲಾಗಿದ್ದು ಪ್ರವಾಸಿಗರು ಆದಷ್ಟೂ ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಲಾಗುತ್ತಿದೆ.

ಬೆಂಗಳೂರಿನಿಂದ ಆಗಮಿಸಿದ್ದ ಲೀಲಾ ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ....

ಕಳೆದ ಕೆಲವು ದಿನಗಳ ಮಳೆಯಿಂದ ಕಡಲು ಪ್ರಕ್ಷುಬ್ಧಗೊಂಡಿತ್ತು.ಆದರೆ ಇವತ್ತು ಮಳೆಯಿರಲಿಲ್ಲ.ಹೀಗಾಗಿ ಕಡಲು ಕೂಡ ಶಾಂತವಾಗಿತ್ತು ಉಡುಪಿಯಲ್ಲಿ ಇಂದು ಮಳೆಯೂ ಅಲ್ಲದ ಬಿಸಿಲೂ ಅಲ್ಲದ ಸುಂದರ ವಾತಾವರಣವಿದ್ದು ಪ್ರವಾಸಿಗರು ಕಡಲ ಕಿನಾರೆಯಲ್ಲಿ ಮೋಜು-ಮಸ್ತಿ ಮಾಡಿದ್ರು. ಮೈಸೂರಿನಿಂದ ಆಗಮಿಸಿದ್ದ ಫಾತಿಮಾ ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ.

ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಗಳಲ್ಲಿ ಸಂಜೆ ಹೊತ್ತಿಗೆ ಮಲ್ಪೆ ಬೀಚ್ ಪ್ರವಾಸಿಗರಿಂದ ತುಂಬಿ ರುತ್ತದೆ.ಆದರೆ ಇವತ್ತು ಬೆಳಿಗ್ಗಿನಿಂದಲೇ ನೂರಾರು ಜನ ಪ್ರವಾಸಿಗರು ಬೀಚ್ ಗೆ ಬಂದು ರಿಲಾಕ್ಸ್ ಆದರು.ಕಡಲ ಬೃಹತ್ ಗಾತ್ರದ ಅಲೆಗಳ ಜೊತೆ ಮೈಮರೆತು ಆಟವಾಡುತ್ತಿದ್ದ ಪ್ರವಾಸಿಗರಲ್ಲಿ ಮಾಸ್ಕ್ ಆಗಲಿ,ಸಾಮಾಜಿಕ ಅಂತರವಾಗಲಿ ಇರಲಿಲ್ಲ.ಒಟ್ಟಿನಲ್ಲಿ ಮನೆಯೊಳಗೇ ಬಂಧಿಯಾಗಿದ್ದ ಜನರು ಮಲ್ಪೆ ಬೀಚ್ ನಲ್ಲಿ ಒಂದಷ್ಟು ಹೊತ್ತು ಒಳ್ಳೆಯ ಸಮಯ ಕಳೆದಿದ್ದು ಸುಳ್ಳಲ್ಲ.

Reach Count: 
12659
Show Detail Screen Advertisement: 
Yes