Public News

News Subject: 
ಕಾರವಾರ: ಕದ್ರಾ ಡ್ಯಾಂನಿಂದ ಏಕಾಏಕಿ 2 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಟ್ಟ ಅಧಿಕಾರಿಗಳು- 18 ಮನೆಗಳು ನೆಲಸಮ
Upload Image: 
PublicNext--553188--node-nid
Category: 
Nature
Body: 

ಕಾರವಾರ: ಕದ್ರಾ ಜಲಾಶಯದಿಂದ ಏಕಾಏಕಿ 2 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಟ್ಟ ಪರಿಣಾಮ 18 ಮನೆಗಳು ನೆಲಸಮವಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕದ್ರಾ ಜಲಾಶಯ ಬಹತೇಕ ತುಂಬಿದೆ. ಪರಿಣಾಮ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿದೆ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರ ಬಿಟ್ಟಿದ್ದು, ಜಲಾಶಯ ಪಾತ್ರದ ಮನೆಗಳಿಗೆ ನೀರು ಹೊಕ್ಕಿದ್ದು, ಕ್ಷಣಾರ್ಧದಲ್ಲೆ ಮನೆಗಳು ಜಲಾವೃತಗೊಂಡು ನೆಲಕಚ್ಚಿವೆ.

ಇನ್ನು ಬೆಳಗ್ಗೆ ನೀರು ಇಳಿದ ಮೇಲೆ ಮನೆಗಳ ಸ್ಥಿತಿ ಕಂಡು ನಿವಾಸಿಗಳು ಕಣ್ಣೀರು ಹಾಕಿದ್ದಾರೆ. ಮೈಮೇಲೆ ಉಟ್ಟ ಬಟ್ಟೆಯನ್ನು ಬಿಟ್ಟು ಎಲ್ಲವನ್ನು ಕಳೆದುಕೊಂಡು ಬೀದು ಪಾಲಾಗಿರುವ ಕುಟುಂಬಗಳು ಏಕಾಏಕಿ‌ ನೀರು ಬಿಡುಗಡೆ ಮಾಡಿದ ಜಲಾಶಯದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Reach Count: 
46743
Show Detail Screen Advertisement: 
Yes