Kshetra Samachara

Local News Subject: 
ಮಂಗಳೂರು: ಇಹಲೋಕ ತ್ಯಜಿಸಿದ ಪೊಲೀಸ್ ಶ್ವಾನ ಸುಧಾ...
City: 
Udupi
Mangalore
Video Thumbnail: 
PublicNext--553155--node-nid
Category: 
Human Stories
Body: 

ಮಂಗಳೂರು: ಮಂಗಳೂರು ನಗರದ ಪೊಲೀಸ್ ಶ್ವಾನ ದಳದ ಸ್ನಿಫರ್ ಡಾಗ್ ಸುಧಾ ಇಂದು ಉಸಿರು ನಿಲ್ಲಿಸಿದೆ. ಮಂಗಳೂರು ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 2011 ರಂದು ಹುಟ್ಟಿದ ಈ ಶ್ವಾನ ಸುಧಾ 2012 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು. ಡಾಬರ್ ಮೇನ್ ಪಿಂಚರ್ ಜಾತಿಗೆ ಸೇರಿದ ಈ ನಾಯಿಗೆ ಹತ್ತು ವರ್ಷ ಮೂರು ತಿಂಗಳು ವಯಸ್ಸಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸುಧಾಳಿಗೆ ಎದೆಭಾಗದಲ್ಲಿ ಕ್ಯಾನ್ಸರ್ ಟ್ಯೂಮರ್ ಆಗಿತ್ತು. ಅದಕ್ಕೆ ಚಿಕಿತ್ಸೆ ಕೂಡಾ ಮಾಡಲಾಗಿತ್ತು. ಆ ಬಳಿಕ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದರೂ ಕಳೆದೊಂದು ವಾರದಿಂದ ಸುಧಾಳ ಆರೋಗ್ಯ ಹದಗೆಟ್ಟಿತ್ತು. ಇದಕ್ಕಾಗಿ ಚಿಕಿತ್ಸೆ ನಡೆಯುತ್ತಿದ್ದರೂ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಅಂತ್ಯ ಸಂಸ್ಕಾರ ನೇರವೇರಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನ ಸಹಕರಿಸಿತ್ತು. ಎರಡು ಕೊಲೆ ಪ್ರಕರಣಗಳ ಮೃತದೇಹ ಪತ್ತೆಕಾರ್ಯ ಹಾಗೂ ಗಂಭೀರ ಪ್ರಕರಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಪ್ರಕರಣಗಳ ಪತ್ತೆಹಚ್ಚುವಲ್ಲಿ ಈ ಶ್ವಾನ ಸಹಕರಿಸಿತ್ತು. ಡಾಗ್ ಸ್ವ್ಕಾಡ್ನಲ್ಲಿ ಅತ್ಯಂತ ಚುರುಕಾದ ಶ್ವಾನ ಇದಾಗಿತ್ತು ಅಂದರು.

Reach Count: 
7429
Show Detail Screen Advertisement: 
Yes