Public News

News Subject: 
ಹೆಗಲ ಮೇಲೆ ಬೈಕ್ ಹೊತ್ತು ನಡೆದ ಬಾಹುಬಲಿ
Video Thumbnail: 
PublicNext--553040--node-nid
Category: 
Nature
Human Stories
Body: 

ಶಿಮ್ಲಾ: ಮಳೆಯಿಂದಾಗಿ ರಸ್ತೆ ಬಂದ್‌ ಆಗಿದ್ದರಿಂದ ಸವಾರನೋರ್ವ ಬೈಕ್ ಹೆಗಲ ಮೇಲೆ ಸಾಗಿದ ಘಟನೆ ಹಿಮಾಚಲ ಪ್ರದೇಶದ ಚಂಬಾ ಕಣಿವೆಯಲ್ಲಿ ನಡೆದಿದೆ.

ಕಳೆದೊಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಣಿವೆ ಭಾಗಗಳಲ್ಲಿ ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಚಂಬಾದ ತಿಸ್ಸಾ ಎಂಬಲ್ಲಿ ರಸ್ತೆ ಮೇಲೆ ಮಣ್ಣು ಕುಸಿದು ನೀರು ಹರಿಯುತ್ತಿತ್ತು. ರಸ್ತೆಯ ಮತ್ತೊಂದು ಕಡೆ ಸಾಗಬೇಕಿದ್ದ ಸವಾರ ತನ್ನ ದ್ವಿಚಕ್ರ ವಾಹನವನ್ನು ಹೆಗಲ ಮೇಲೆ ಹೊತ್ತು, ಕಣಿವೆಯ ಅಂಚಿನಲ್ಲಿ ನಡೆದಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Reach Count: 
71345
Show Detail Screen Advertisement: 
Yes