Public News

News Subject: 
ಯುಪಿಯಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ತ್ವರಿತವಾಗಿ ರಾಮ ಮಂದಿರ ನಿರ್ಮಾಣ: ಬಿಎಸ್‌ಪಿ ಭರವಸೆ
Upload Image: 
PublicNext--553022--node-nid
Category: 
Politics
Body: 

ಲಕ್ನೋ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಭರ್ಜರಿ ತಯಾರಿಯನ್ನೇ ನಡೆಸುತ್ತಿದೆ. ಈ ಬಾರಿ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಸರ್ವ ಪ್ರಯತ್ನ ನಡೆಸಿದೆ.

ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು ಎಂದು ಬಿಎಸ್‌ಪಿ ಭರವಸೆ ನೀಡಿದೆ. ಬ್ರಾಹ್ಮಣರನ್ನು ಹೆಚ್ಚೆಚ್ಚು ತಲುಪುವ ದೃಷ್ಟಿಯಿಂದ, ಬಿಎಸ್​ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್​ ಚಂದ್ರ ಮಿಶ್ರಾ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಹೊಸ ಕಾರ್ಯಕ್ರಮಗಳನ್ನೂ ಶುರು ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸತೀಶ್​ ಚಂದ್ರ ಮಿಶ್ರಾ, "2020ರ ಆಗಸ್ಟ್​ 5ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಭೂಮಿಪೂಜೆ ನೆರವೇರಿಸಿದ್ದಾರೆ. ಒಂದು ವರ್ಷವಾಗುತ್ತ ಬಂದರೂ ಇನ್ನೂ ಮಂದಿರಕ್ಕೆ ಅಡಿಪಾಯ ಹಾಕುವ ಕೆಲಸವೇ ಪೂರ್ತಿಯಾಗಿ ಮುಗಿದಿಲ್ಲ. ದೇಗುಲ ನಿರ್ಮಾಣ ಯಾವಾಗ ಮುಗಿಯುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಇನ್ನೂ ಎಷ್ಟು ವರ್ಷ ಬೇಕು ಎಂದು ಪ್ರಶ್ನಿಸಿದ್ದಾರೆ.

Reach Count: 
20151
Show Detail Screen Advertisement: 
Yes