Public News

News Subject: 
ವರನಿಗೆ ವಿಶಿಷ್ಟ ಷರತ್ತು ವಿಧಿಸಿದ ಮದುವೆ : ವಿಡಿಯೋ ವೈರಲ್
Category: 
Viral
Body: 

ವರ ಮತ್ತು ವಧುವಿನ ಮಧ್ಯೆ ವಿವಾಹಕ್ಕೂ ಮುಂಚಿತವಾಗಿ ಕೆಲವು ಷರತ್ತುಗಳನ್ನು ಹಾಕಿಕೊಂಡು ಒಪ್ಪಂದವನ್ನು ಮಾಡಿಕೊಂಡು ಅದಕ್ಕೆ ಇಬ್ಬರೂ ಸಮ್ಮತಿಯನ್ನು ಸೂಚಿಸಿದ ನಂತರವೇ ಪರಸ್ಪರರು ಮದುವೆ ಆಗುವುದು ಸಾಮಾನ್ಯ.

ಆದರೆ ಇಲ್ಲಿ ನಡೆದ ಒಂದು ತಮಾಷೆ ಘಟನೆಯಲ್ಲಿ ವಧುವಿನ ಮನೆಯವರು ವರನಿಗೆ ಕೆಲವು ತಮಾಷೆಯ ಷರತ್ತುಗಳನ್ನು ಹಾಕಿ ಅದಕ್ಕೆ ಒಪ್ಪಿ ಸಹಿ ಹಾಕುವಂತೆ ಕೋರಿದ್ದಾರೆ.

ವಿಡಿಯೋದಲ್ಲಿ ರಾಧಿಕಾ ಮತ್ತು ಆಯುಷ್ ಇಬ್ಬರೂ ಮದುವೆಯಾಗಿ ಮನೆಗೆ ಬರುತ್ತಾರೆ, ಬಂದಾಗ ಅವರನ್ನು ತಡೆದು ವಧು ರಾಧಿಕಾ ಅವರ ಮನೆಯವರು

ಆಯುಷ್ ಮತ್ತು ರಾಧಿಕಾ ಇಬ್ಬರು ಒಪ್ಪಂದಕ್ಕೆ ಒಳಪಡುವವರಾಗಿದ್ದು, ರಾಧಿಕಾ ಯಾವಾಗಲೂ ಸರಿಯಾಗಿರುತ್ತಾರೆ, ರಾಧಿಕಾ ಅವರನ್ನು ವರ್ಷದಲ್ಲಿ 2-3 ಬಾರಿಯಾದರೂ ವಿದೇಶಕ್ಕೆ ಪ್ರವಾಸಕ್ಕೆ ತಪ್ಪದೆ ಕರೆದುಕೊಂಡು ಹೋಗಬೇಕು ಮತ್ತು ರಾಧಿಕಾಗೆ ಏನೇ ಇಷ್ಟವಾದರೂ, ಯಾವಾಗ ಇಷ್ಟವಾದರೂ ಅದನ್ನು ತಕ್ಷಣ ಕೊಡಿಸಬೇಕು, ಇಲ್ಲ ಅನ್ನಬಾರದು ಎಂದು ಷರತ್ತುಗಳನ್ನು ಹಾಸ್ಯಸ್ಪದವಾಗಿ ಬರೆಯಲಾಗಿತ್ತು.

ಅದನ್ನು ಓದಿ ವರನು ನಗುತ್ತಾ ಸಹಿ ಹಾಕಿದ್ದು ಮತ್ತು ಅಲ್ಲಿದ್ದವರು ಅದನ್ನು ನೋಡಿ ಜೋರಾಗಿ ನಕ್ಕಿದ್ದು ತುಂಬಾನೇ ಕ್ಯೂಟ್ ಆಗಿತ್ತು.

Reach Count: 
68504
Show Detail Screen Advertisement: 
Yes