Public News

News Subject: 
ಅಮ್ಮನಾದ 'ಯುವರತ್ನ' ನಟಿ ಸಾಯೇಶಾ ಸೈಗಲ್
Upload Image: 
PublicNext--552996--node-nid
Category: 
Cinema
Body: 

ಬಹುಭಾಷಾ ತಾರೆ, 'ಯುವರತ್ನ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಸಯೇಶಾ ಸೈಗಲ್ ಹಾಗೂ ತಮಿಳು ನಟ ಆರ್ಯ ದಂಪತಿಗೆ ಹೆಣ್ಣು ಮಗುವಾಗಿದೆ. ಈ ಸಹಿ ಸುದ್ದಿಯನ್ನು ತಮಿಳು ನಟ ವಿಶಾಲ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

‘ನಾನು ಅಂಕಲ್​ ಆಗಿದ್ದೇನೆ ಎಂಬ ಈ ಖುಷಿ ಹಂಚಿಕೊಳ್ಳಲು ಬಹಳ ಖುಷಿ ಆಗುತ್ತಿದೆ. ನನ್ನ ಸಹೋದರ ಜಮ್ಮಿ ಮತ್ತು ಸಾಯೇಶಾ ಅವರಿಗೆ ಹೆಣ್ಣು ಮಗು ಜನಿಸಿದೆ. ಚಿತ್ರೀಕರಣದ ನಡುವೆ ಈ ಖುಷಿಯ ಕ್ಷಣವನ್ನು ನಿಯಂತ್ರಿಸಲು ಆಗುತ್ತಿಲ್ಲ. ಅವರಿಗೆ ಸದಾ ಒಳ್ಳೆಯದಾಗಲಿ. ತಾಯಿ-ಮಗಳಿಗೆ ದೇವರ ಕೃಪೆ ಇರಲಿ. ಅಪ್ಪನಾಗಿ ಹೊಸ ಜವಾಬ್ದಾರಿ ನಿಭಾಯಿಸುತ್ತಿರುವ ಆರ್ಯಾಗೆ ಆಲ್​ ದಿ ಬೆಸ್ಟ್​’ ಎಂದು ವಿಶಾಲ್ ಟ್ವೀಟ್​ ಮಾಡಿದ್ದಾರೆ.

ಬಹುಕಾಲದಿಂದ ಪ್ರೀತಿಯಲ್ಲಿದ್ದ ಆರ್ಯ ಹಾಗೂ ಸಾಯೇಶಾ 2019ರಲ್ಲಿ ಸತಿಪತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮೊದಲ ಮಗುವಿಗೆ ಪೋಷಕರಾಗಿದ್ದಾರೆ.

Reach Count: 
23272
Show Detail Screen Advertisement: 
Yes