Public News

News Subject: 
ಹುಬ್ಬಳ್ಳಿ: ವಿಶ್ವದಲ್ಲಿಯೇ ದೊಡ್ಡ ವ್ಯಾಕ್ಸಿನೇಷನ್‌ ಅಭಿಯಾನ ಕೇಂದ್ರ ಸರ್ಕಾರ ಮಾಡುತ್ತಿದೆ: ಸಚಿವ ಜೋಶಿ...!
Video Thumbnail: 
PublicNext--552995--node-nid
Category: 
Health & Fitness
COVID
Body: 

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನವನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಇಲ್ಲಿನ ಲಸಿಕೆ ವಿತರಣೆಯ ಪರಿಶೀಲನೆ ನಡೆಸಿ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದರು.

ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ವರ್ಲ್ಡ್ ಲಾರ್ಜೆಸ್ಟ್ ಲಸಿಕಾ ಅಭಿಯಾನವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. 130 ಕೋಟಿ ಜನಸಂಖ್ಯೆಯಲ್ಲಿ ನಿನ್ನೆಯವರೆಗೂ 42 ಕೋಟಿ 34 ಲಕ್ಷ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿದ್ದೇವೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಹುದೊಡ್ಡ ಸಾಧನೆಯಾಗಿದೆ. ವಿಶ್ವದಲ್ಲಿಯೇ ಬಹುದೊಡ್ಡ ವ್ಯಾಕ್ಸಿನೇಷನ್‌ ಅಭಿಯಾನವಾಗಿದೆ ಎಂದರು.

ಚೀನಾ ಹೊರತುಪಡಿಸಿದರೆ ವಿಶ್ವದಲ್ಲಿಯೇ ದೊಡ್ಡ ಪ್ರಮಾಣದ ಜನಸಂಖ್ಯೆ ಇರುವುದು ನಮ್ಮ ದೇಶದಲ್ಲಿ ಮಾತ್ರ ಈ ನಿಟ್ಟಿನಲ್ಲಿ ದೇಶದ ಕೇಂದ್ರ ಸರ್ಕಾರ ಸಾರ್ವಜನಿಕ ಸೇವೆಗೆ ಬಹುದೊಡ್ಡ ಯೋಜನೆಯನ್ನು ರೂಪಿಸಿದೆ ಎಂದು ಅವರು ಹೇಳಿದರು.

Reach Count: 
88043
Show Detail Screen Advertisement: 
Yes