Public News

News Subject: 
ಹಿರಿಯೂರು: ಇದೇನು ರಸ್ತೆಯೋ ? ಅಥವಾ ಕೆಸರು ಗದ್ದೆಯೋ? ಜನಪ್ರತಿನಿಧಿಗಳೇ ಕೊಂಚ ಇಲ್ಲಿ ನೋಡಿ
Video Thumbnail: 
PublicNext--552986--node-nid
Category: 
Infrastructure
Nature
Body: 

ಹಿರಿಯೂರು : ಕೋಟೆ ನಾಡು ಚಿತ್ರದುರ್ಗದಲ್ಲಿ ಕಳೆದ ಮುರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿದ ಮಳೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು, ಸಂಚರಿಸಲು ಬಾರದಂತೆ ಆಗಿವೆ. ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದ ರಸ್ತೆ ಮಣ್ಣಿನಿಂದ ಕೂಡಿದ್ದು, ಮಳೆಗೆ ರಸ್ತೆಯಲ್ಲ ಕೆಸರು ಗದ್ದೆಯಂತಾಗಿದೆ.

ಈ ಊರಿನ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಗ್ರಾಮಸ್ಥರ ಮಾತುಗಳಾಗಿವೆ. ದ್ವಿಚಕ್ರ ವಾಹನಗಳು ಸರಾಗವಾಗಿ ಸಂಚರಿಸಲು ಆಗುತ್ತಿಲ್ಲ. ಎಷ್ಟೋ ಜನರು ಬಿದ್ದು ಗಾಯಾಗಳಾಗಿರುವುದಂಟು ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು ಗ್ರಾಮಸ್ಥರು ಮಾತುಗಳು. ಇದಲ್ಲದೆ ತಾಲ್ಲೂಕಿನ ಚಿತ್ರದೇವರಹಟ್ಟಿ ಗ್ರಾಮ, ದೇವಕೊಟ್ಟ, ನಂದಿಹಳ್ಳಿ ಗೊಲ್ಲರಹಟ್ಟಿಯ ರಸ್ತೆಗಳು ದುರಸ್ತಿ ಮಾಡಬೇಕಿದೆ. ಇನ್ನು ಬಬ್ಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಕೆಲವರು ತಕರಾರು ಮಾಡುತ್ತಿರುವುದಕ್ಕೆ ಇತರರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ. ಅಮ್ಮನಹಟ್ಟಿ, ಕೂಡ್ಲಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆಯಾಗದ ಕಾರಣ ರಸ್ತೆಯಲ್ಲಿ ನೀರು ನಿಂತಿದ್ದು, ಸೊಳ್ಳೆಗಳು ಹೆಚ್ಚುತ್ತಿವೆ.

ಇನ್ನು ಓಡಾಟಕ್ಕೆ ಅಡಚಣೆಯಾಗಿದೆ. ಗ್ರಾಮಗಳಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇದಲ್ಲದೆ ಹಿರಿಯೂರು ನಗರದ ವಾಣಿ ಕಾಲೇಜು ಹಿಂಭಾಗದ ದೇವಗಿರಿ ನಗರದಲ್ಲಿ ಸಹ ರಸ್ತೆ ಸಂಪೂರ್ಣವಾಗಿ ಮಳೆಯಿಂದಾಗಿ ಕೆಸರಿನಿಂದ ಕೂಡಿದೆ. ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆಯ ಸದಸ್ಯರು ಗಮನಹರಿಸಬೇಕು ಎಂಬುದು ನಗರದ ನಿವಾಸಿಗಳು ಆಗ್ರಹಿಸಿದ್ದಾರೆ. ಜೊತೆಗೆ ತಾಲೂಕಿನ ಹಲವಾರು ಕಡೆ ರಸ್ತೆಗಳು ದುರಸ್ತಿಯಾಗಬೇಕಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.

Reach Count: 
36318
Show Detail Screen Advertisement: 
Yes