Public News

News Subject: 
ಚಿತ್ರದುರ್ಗ : ಎಸ್ಸಿ, ಎಸ್ಟಿ ಗೆ ಭೂ ರಹಿತರಿಗೆ ಸಿಎಂ ಬಿಎಸ್ವೈ ಭೂಮಿ ನೀಡಿದ್ದಾರೆ : ಕಟೀಲ್ ಹೇಳಿಕೆ
Category: 
Politics
Body: 

ಚಿತ್ರದುರ್ಗ : ರಾಜ್ಯದಲ್ಲಿ ಭೂ ರಹಿತ ಎಸ್ಸಿ, ಎಸ್ಟಿ ಬಡ ಕುಟುಂಬಗಳು ಭೂಮಿ ಇಲ್ಲ ಎಂದು ಕಣ್ಣೀರು ಹಾಕಿದಾಗ ಅವರಿಗೆ ಮೂರು, ಮೂರು ಎಕರೆ ಜಾಗವನ್ನು ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಮಹದಾಯಿ ಹಾಗೂ ಮೇಕೆದಾಟು ಯೋಜನೆಯಲ್ಲಿ ವಿಜಯ ಪಡೆದಿದ್ದೆವೆ ಅಲ್ಲದೆ ಇವತ್ತು ನಮ್ಮ ಸರ್ಕಾರ ಅದ್ಭುತವಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಗೋ ಸಂಸ್ಕೃತಿಯನ್ನು ಆರಾಧನೆ ಮಾಡುವ ಪರಂಪರೆ ನಮ್ಮದು ಎಂದರು.ಬಹಳ ವರ್ಷಗಳಿಂದ ನಮ್ಮ ಹಿರಿಯರು ಗೋ ಹತ್ಯೆ ನಿಷೇಧ ಕಾನೂನು ಬರಬೇಕು ಎಂದು ಹೇಳುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದ ನಂತರ ಸ್ವಾತಂತ್ರ್ಯ ಬಂದ ಕಾಲ ಘಟ್ಟದಲ್ಲಿ ಒಂದೊಂದು ಮನೆಗೆ ಐದು ಗೋವುಗಳಿದ್ದವು. ಆದರೆ ಇವತ್ತಿನ ಅಂಕಿ ಅಂಶಗಳ ಪ್ರಕಾರ ಐದು ಮನೆಗೆ ಒಂದು ಗೋವುಗಳಿಲ್ಲದ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.

ಗೋವಿನ ರಕ್ಷಣೆ ಮಾಡಬೇಕು, ಕೃಷಿ ಸಂಸ್ಕೃತಿ ಉಳಿಸಬೇಕು, ಗೋ ಹತ್ಯೆ ಉಳಿಸಬೇಕು ನಮ್ಮ ತಾಯಿಯ ಸಂಸ್ಕೃತಿ ಪರಂಪರೆಯನ್ನು ಹೇಳುತ್ತಾ ಬಂದಿದ್ದೆವೆ. ಕಳೆದ ಬಾರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನ ಮಾಡಿದ್ದರು.ಆದರೆ ಮೊಟ್ಟ ಮೊದಲ ಬಾರಿಗೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಗೋ ಹತ್ಯೆ ಕಾಯ್ದೆಯನ್ನು ತೆಗೆದು ಬಿಸಾಕಿದ್ದರು. ಆದರೆ ಮತ್ತೆ ಯಡಿಯೂರಪ್ಪನ ಸರ್ಕಾರ ಈ ರಾಜ್ಯದ ಜನರ ಮಾತಿಗೆ ಮನ್ನಣೆ ಕೊಟ್ಟು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನ ಮಾಡಿದರು. ಸಿಎಂ ಬಿಎಸ್ವೈ ಕೇವಲ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಾತ್ರ ಜಾರಿಗೆ ತರಲಿಲ್ಲ ಮೊಟ್ಟಮೊದಲಿಗೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭಿಸುವುದರ ಜೊತೆಗೆ ವಿಶೇಷ ಅನುದಾನ ಕೊಟ್ಟ ಮೊಟ್ಟ ಮೊದಲ ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇವತ್ತು ರಾಜ್ಯದಲ್ಲಿ ಗೋವಿನಲ್ಲಿ ಪರಿವರ್ತನೆಯಾಗುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ರೈತರಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. ಇದಲ್ಲದೆ ಯಡಿಯೂರಪ್ಪ ಅವರು ಕೋವಿಡ್ ಸಂದರ್ಭದಲ್ಲಿ, ಹಾಗೂ ನೆರೆ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸುವ ಮೂಲಕ ಅತ್ಯುತ್ತಮ ಆಡಳಿತ ಕೊಟ್ಟಿದ್ದಾರೆ. 45 ವರ್ಷಗಳ ಕಾಲ ಸುದೀರ್ಘ ಹೋರಾಟದ ಮೂಲಕ ಬಂದ ಸಿಎಂ ಬಿಎಸ್ವೈ ರೈತರ ಬಗ್ಗೆ ವಿಶೇಷ ಕಾಳಾಜಿ ಹೊಂದಿದವರು ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಟೀಲ್ ಹೇಳಿದರು.

Reach Count: 
36205
Show Detail Screen Advertisement: 
Yes