Kshetra Samachara

Local News Subject: 
ಹುಬ್ಬಳ್ಳಿ: ವಿದ್ಯಾನಿಕೇತನ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ
City: 
Hubballi-Dharwad
Upload Image: 
PublicNext--552970--node-nid
Category: 
Education
Body: 

ಹುಬ್ಬಳ್ಳಿ: ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪಿ.ಯು.ಸಿ. ದ್ವಿತೀಯ ವಿದ್ಯಾರ್ಥಿಗಳು ಗುಣಾತ್ಮಕ ಸಾಧನೆ ಗೈದಿದ್ದಾರೆ.

ಪ್ರಜ್ವಲ್ ಸಾತನ್ನವರ, ಓಂಕಾರ ಭಗತ್, ಪ್ರಜ್ವಲ್ ಬಸ್ತವಾಡಕರ, ಚೈತ್ರಾ ಗೌರಿ, ವೈಷ್ಣವಿ ಚವ್ಹಾಣ ವಿದ್ಯಾರ್ಥಿಗಳು ಪ್ರತಿಶತ 100 ಅಂಕಗಳನ್ನು ಪಡೆದಿದ್ದಾರೆ. ಅಭಿಷೇಕ ಅಂಗಡಿ, ಐಶ್ವರ್ಯಾ ಘಟಪನದಿ, ಭಾಗ್ಯಶ್ರೀ, ಚೈತ್ರಾ ಕುಲಕರ್ಣಿ, ಡಿ.ರಿತ್ವಿಕ್, ದೇವೆಂದ್ರ ಕುಂದೂರ, ಧೀರಜ್ ಹೆಗಡೆ, ಧೃವ ಜೋಶಿ, ಜ್ಯೋತಿ ಪಾಟೀಲ, ಮಾನಸಾ ಹುಲತ್ತಿ, ಮಾನವ ಟಾಕೆ, ನಾಗೇಶ್ವರರಾವ ಕುಂಟೆ, ಪೂಜಾಶ್ರೀ ವ್ಹಿ, ಪ್ರಫೂಲ್ ಪಟಗಾರ, ಪ್ರಶಾಂತ ಕರಲಿ, ಪ್ರಥಮ ನಾಯಕ, ಪ್ರಥಮೇಶ ದೇವರಮನಿ, ಪ್ರತೀಕ ಶೆಣಾಯ್, ಪೃಥ್ವಿ ಜೋಶಿ, ರಶ್ಮಿ ಸಜ್ಜನಶೆಟ್ಟರ್, ಸಂಜನಾ ನಾಯ್ಕ, ಸಂಜನಾ ಶಿವಪೂರಮಠ, ಶಶಾಂಕ ಪಾಟೀಲ, ಶ್ರೇಯಾ ಪೂಜಾರ, ಸಿದ್ಧವಿನ್ ಬುರ್ಲಿ, ಸ್ಪಂದನಾ ನಾಯ್ಡು, ಶ್ರೀಪ್ರಿಯಾ ಎಚ್.ಆರ್., ಸುಧನ್ವಾ ಕುಲಕರ್ಣಿ, ಸುನಿಧಿ ನಾಯಕ, ವಾಣಿ ಪ್ಯಾಟಿ, ವಿಷ್ಣು ನಾಡಗೌಡರ ಈ ವಿದ್ಯಾರ್ಥಿಗಳು 99 ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.

ಒಟ್ಟು 497 ವಿದ್ಯಾರ್ಥಿಗಳಲ್ಲಿ 402 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ. 95 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನೂ ಭೌತಶಾಸ್ತ್ರದಲ್ಲಿ 101 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 60 ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ 163 ವಿದ್ಯಾರ್ಥಿಗಳು ಮತ್ತು ಸಂಖ್ಯಾಶಾಸ್ತ್ರದಲ್ಲಿ 35 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ 13 ವಿದ್ಯಾರ್ಥಿಗಳು ಒಟ್ಟು 400 ಅಂಕಗಳಿಗೆ 400 ಅಂಕ ಪಡೆದಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ 16 ವಿದ್ಯಾರ್ಥಿಗಳು ಒಟ್ಟು 400 ಅಂಕಗಳಿಗೆ 400 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಮಹತ್ವದ ಸಾಧನೆಗೆ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯು ಹರ್ಷವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿ ಸಮೂಹಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Reach Count: 
14479
Show Detail Screen Advertisement: 
Yes