Kshetra Samachara

Local News Subject: 
ನವಲಗುಂದ : ಇದು ಎಪಿಎಂಸಿಯೋ..? ಕಸದ ತಿಪ್ಪೆಯೋ..?
City: 
Hubballi-Dharwad
Video Thumbnail: 
PublicNext--552963--node-nid
Category: 
Infrastructure
Body: 

ನವಲಗುಂದ : ಜಿಲ್ಲೆ ಸೇರಿದಂತೆ ತಾಲ್ಲೂಕಿನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸ್ವಚ್ಛತೆಗೂ ಹೆಚ್ಚಿನ ಗಮನ ಹರಿಸುತ್ತಿದೆ. ಮೊದಲೇ ಈ ಸಮಯದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾದಂತಹ ಸಾಂಕ್ರಮಿಕ ರೋಗದ ಭಯ ಇದೆ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಎಪಿಎಂಸಿ ಯಲ್ಲಿನ ಜನರ ಗತಿ ಏನು ಎಂಬುದು ಅಧಿಕಾರಿಗಳು ಕಿಂಚಿತ್ತು ಯೋಚಿಸುತ್ತಿಲ್ಲಾ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ.

ಕೋವಿಡ್ ಹರಾಡುವಿಕೆ ಹೆಚ್ಚಾಗುತ್ತಿದ್ದಂತೆ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರನ್ನು ಎಪಿಎಂಸಿಗೆ ವರ್ಗಾಯಿಸಲಾಗಿತ್ತು. ಆದರೆ ಇಲ್ಲಿನ ಅಸ್ವಚ್ಛತೆಗೆ ಹೊಣೆ ಯಾರು ಎಂಬುದು ತಿಳಿತಾ ಇಲ್ಲಾ. ಮಳೆಯಿಂದ ಮೊದಲೇ ಕೆಸರು ಗದ್ದೆಯಂತಾದ ಎಪಿಎಂಸಿಯಲ್ಲಿ ಸ್ವಚ್ಛತೆ ಮಾಡದೇ ಇರುವುದು ಇನ್ನಷ್ಟು ಕೊಳಚೆಗೆ ಕಾರಣವಾಗುತ್ತಿದೆ. ಅಲ್ಲೇ ಕೊಳಚೆ ವ್ಯಾಪಾರಸ್ಥರು ಸಹ ಅಲ್ಲೇ ಕೂತು ವ್ಯಾಪಾರ ಮಾಡ್ತಾ ಇದ್ದಾರೆ. ಹಂದಿಗಳು ಹಿಂಡು ಹಿಂಡಾಗಿ ತಿರುಗಾಡುತ್ತಿವೆ. ಇದಕ್ಕೆಲ್ಲಾ ಕಾರಣವೇ ಸ್ವಚ್ಛತೆಯ ಕೊರತೆ, ಈ ಬಗ್ಗೆ ಪುರಸಭೆ ಅಧಿಕಾರಿಗಳು ಇಚ್ಛೆತ್ತು ಚರಂಡಿಯನ್ನು ಸ್ವಚ್ಛಗೊಳಿಸಿ, ಸುತ್ತ ಮುತ್ತಲಿನ ಸ್ಥಳವನ್ನು ಶುಚಿಗೊಳಿಸಬೇಕಿದೆ.

Reach Count: 
36719
Show Detail Screen Advertisement: 
Yes