Kshetra Samachara

Local News Subject: 
ಮುಲ್ಕಿ: ಬಪ್ಪನಾಡು ಚಿಕ್ಕ ಮೇಳದಿಂದ ಜನಾಕರ್ಷಣೆಯ ಮನೆ ಮನೆ ತಿರುಗಾಟ ಆರಂಭ
City: 
Udupi
Mangalore
Category: 
Cultural Activity
Body: 

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಒಂಬತ್ತು ಮಾಗಣೆಯ ದುರ್ಗಾಪರಮೇಶ್ವರೀ ದೇವಸ್ಥಾನದ ಯಕ್ಷಗಾನ ಚಿಕ್ಕ ಮೇಳದ ಮನೆಮನೆ ತಿರುಗಾಟ ಆರಂಭ ವಾಗಿದ್ದು ಮುಂದಿನ ನಾಲ್ಕು ತಿಂಗಳು ಯಕ್ಷ ಪ್ರೇಮಿಗಳಿಗೆ ಮನೆಯಲ್ಲಿ ಯಕ್ಷಗಾನದ ರಸದೌತಣ ನೀಡಲಿದ್ದಾರೆ.

ಬಪ್ಪನಾಡು ಚಿಕ್ಕಮೇಳದ ವ್ಯವಸ್ಥಾಪಕ ವಿನೋದ್ ಕುಮಾರ್ "ಪಬ್ಲಿಕ್ ನೆಕ್ಸ್ಟ್" ಜೊತೆ ಮಾತನಾಡಿ ಬಪ್ಪನಾಡು ಯಕ್ಷಗಾನ ಚಿಕ್ಕಮೇಳ ನಿರಂತರ ಹತ್ತು ವರ್ಷಗಳಿಂದ ಮಳೆಗಾಲದಲ್ಲಿ ಮನೆ-ಮನೆ ತಿರುಗಾಟ ನಡೆಸುತ್ತಿದ್ದು ಯಕ್ಷಗಾನ ಕಲಾವಿದರಿಗೆ ಕಲಾಪ್ರೇಮಿಗಳು ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ.

ಸಂಜೆ 6 ಗಂಟೆಯಿಂದ ರಾತ್ರಿ 10.30 ವರೆಗೆ ಕಲಾ ಸೇವೆ ನಡೆಯುತ್ತಿದ್ದು ಮುಲ್ಕಿ, ಮಂಗಳೂರು, ಮತ್ತಿತರ ಕಡೆಗಳಲ್ಲಿ ಅಪಾರ ಕಲಾಭಿಮಾನಿಗಳ ಪ್ರೋತ್ಸಾಹ ದೊರೆಯುತ್ತಿದೆ.

ಖ್ಯಾತ ಯಕ್ಷಗಾನ ಕಲಾವಿದ ಕೊಳತ್ತಮಜಲ್ ಮಾಧವ ಬಂಗೇರ ಪುಂಡು ವೇಷದಾರಿಯಾಗಿ, ಸ್ತ್ರೀ ವೇಷದಾರಿಯಾಗಿ ಪರಮೇಶ್ವರ ಗಂಗ ನಾಡು, ಭಾಗವತಿಕೆಯಲ್ಲಿ ಸುರೇಶ್ ಹೆಗ್ಡೆ ಬಂಗಾಡಿ, ಮದ್ದಳೆಯಲ್ಲಿ ರೋಹಿತ್ ಉಚ್ಚಿಲ, ಚಂಡೆಯಲ್ಲಿ ರಾಜೇಶ್ ಮಡಂತ್ಯಾರು, ಹಾಗೂ ತಂಡದ ಮ್ಯಾನೇಜರ್ ಭವಾನಿಶಂಕರ್ ಶೆಟ್ಟಿ ಚಿಕ್ಕಮೇಳ ದ ಪ್ರಧಾನ ಸೂತ್ರಧಾರರಾಗಿದ್ದಾರೆ

ಕಳೆದ ಏಪ್ರಿಲ್ ಮೇ ತಿಂಗಳಲ್ಲಿ ಕೊರೊನ ಲಾಕ್ ಡೌನ್ ದಿನಗಳಲ್ಲಿ ಯಕ್ಷಗಾನಕ್ಕೆ ತೀವ್ರ ಹೊಡೆತ ಬಿದ್ದಿದ್ದು ಯಕ್ಷಗಾನ ಕಲಾವಿದರು ಪ್ರದರ್ಶನ ವಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗಲಿಲ್ಲ ಎಂದು ವಿನೋದ್ ಕುಮಾರ್ ತಿಳಿಸಿದ್ದಾರೆ.

Reach Count: 
3141
Show Detail Screen Advertisement: 
Yes