Kshetra Samachara

Local News Subject: 
ಕುಂದಗೋಳ : ಹೇಳ್ದೆ ಕೇಳ್ದೆ ಸರ್ಕಾರಿ ಶಾಲೆ ಮಕ್ಕಳ ಮನೆಗೆ ಬರ್ತಾರೆ ಟೀಚರ್ಸ್ !
City: 
Hubballi-Dharwad
Video Thumbnail: 
PublicNext--552927--node-nid
Category: 
Education
Body: 

ಕುಂದಗೋಳ : ಕೊರೊನಾ ಎರಡನೇ ಅಲೆ ಕಾರಣ ಶಾಲೆಗಳು ಕ್ಲೋಸ್ ಆಗಿ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪಾಠ ಪ್ರಕ್ರಿಯೆ ಬೋಧನೆ ಆರಂಭವಾಗಿದೆ. ಆದ್ರೇ ಆ ಆನ್ಲೈನ್ ಪಾಠ ಕಲಿಯುವ ಮಕ್ಕಳು ಅಭ್ಯಾಸ ನಡೆಸಿದ್ದಾರೆ ? ಕ್ಲಾಸ್ ಕೇಳಿ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ ನೋಡುವವರಾರು ? ಅಲ್ವೇ.

ಎಸ್ ! ಅದನ್ನೇ ಪರಿಶೀಲನೆ ನಡೆಸಲೇಂದೆ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಮಕ್ಕಳಿಗೆ ಪಾಲಕರಿಗೆ ಯಾವುದೇ ಮುನ್ಸೂಚನೆ ನೀಡದೆ ದಿಡೀರ್ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡ್ತಾರೆ.

ಈಗಾಗಲೇ ಕಡಪಟ್ಟಿ ಗ್ರಾಮದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಶಿಕ್ಷಕರು ಮಗು ನಿಯಮಿತವಾಗಿ ಆನ್ಲೈನ್ ಪಾಠ ಕೇಳಿದೆಯಾ ? ಆನ್ಲೈನ್ ಕ್ಲಾಸ್ ಎಷ್ಟು ಪೂರಕವಾಗಿದೆ ? ಮಗು ಪ್ರಶ್ನೆ ಕೇಳುವುದು ಹೋಂ ವರ್ಕ್ ಚೆಕ್ ಮಾಡುವ ಕರ್ತವ್ಯ ಕೈಗೊಂಡಿದ್ದು ಶಾಲೆ ಕ್ಲೋಸ್ ಆದ ದಿನಗಳಲ್ಲೂ ಮಕ್ಕಳ ಬಗೆಗಿನ ಆಸಕ್ತಿ ಹೆಚ್ಚಿಗೆ ಮಾಡಿದ್ದು ಶಿಕ್ಷಕರ ಈ ಕರ್ತವ್ಯ ಕಂಡು ಹಳ್ಳಿಗಳ ಪಾಲಕರು ಖುಷ್ ಆಗಿದ್ದು ಅವರ ಮಕ್ಕಳ ಶಿಕ್ಷಣದ ಪ್ರೀತಿಗೆ ಸಲಾಂ ಎಂದಿದ್ದಾರೆ.

Reach Count: 
84258
Show Detail Screen Advertisement: 
Yes