Public News

News Subject: 
ವಿಪಕ್ಷ ನಾಯಕರೊಂದಿಗೆ ಚರ್ಚೆ ಮಾಡಲು ನಾವು ಸದಾ ಸಿದ್ಧ: ಜೋಶಿ
Category: 
Politics
Body: 

ಧಾರವಾಡ: ಒಂದೂವರೆ ವರ್ಷದಿಂದ ಪ್ರಧಾನಿಗಳ ದೂರದೃಷ್ಟಿಯಿಂದ ಕೊರೊನಾ ನಿಯಂತ್ರಿಸುವ ಕೆಲಸ ಸರಳವಾಗಿ ನಡೆಯುತ್ತಿದೆ. ಮೋದಿ ಅವರನ್ನು ಟೀಕೆ ಮಾಡುವ ವಿಪಕ್ಷ ನಾಯಕರು ಅವರ ಸಾಧನೆ ಬಗ್ಗೆ ಏಕೆ ಮಾತನಾಡುವುದಿಲ್ಲ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕಾ ಅಭಿಯಾನವನ್ನು ಮೋದಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ದೇಶದಲ್ಲಿ 42 ಕೋಟಿ 34 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. 9 ಕೋಟಿ ಜನರಿಗೆ ಎರಡೂ ಡೋಸ್ ಹಾಕಲಾಗಿದೆ. ರಾಜ್ಯದಲ್ಲಿ 8 ಕೋಟಿ 82 ಲಕ್ಷ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 7 ಲಕ್ಷ 61 ಸಾವಿರ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಇದಕ್ಕೆ ವಿರೋಧ ಪಕ್ಷದವರು ಸಹಕಾರ ಕೊಡುತ್ತಿಲ್ಲ. ಅವರ ಸಹಕಾರ ನಮಗೆ ಬೇಕಾಗಿದೆ ಎಂದರು.

ನೂರು ವರ್ಷಗಳ ಹಿಂದೆ ಅಂದರೆ 1919ರಲ್ಲಿ ಇದೇ ರೀತಿ ಮಹಾಮಾರಿ ಕಾಯಿಲೆ ಬಂದಿತ್ತು. ಅದಾದ ಬಳಿಕೆ ಈಗ ಮತ್ತೆ ಅಂತಹ ರೋಗ ಬಂದಿದೆ. ಬೇರೆ ಬೇರೆ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಗ್ರೌಂಡ್ ಲೆವಲ್‌ನಲ್ಲೂ ಆರೋಗ್ಯ ಕಾರ್ಯಕರ್ತರ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಗರೀಬ್ ಕಲ್ಯಾಣ ಯೋಜನೆ ಸಹ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಜೋಶಿ ಹೇಳಿದರು.

Reach Count: 
35595
Show Detail Screen Advertisement: 
Yes