Public News

News Subject: 
ಬಂದೂಕಿನ ಜೊತೆ ಸೆಲ್ಫಿ ಹಾರಿತು ಗುಂಡು, ಹೋಯಿತು ಪ್ರಾಣ!
Upload Image: 
PublicNext-497117-552821-Accident-node
Category: 
Accident
Body: 

ಲಕ್ನೋ: ಇತ್ತಿಚೆಗೆ ಅದೇನ ಕಂಡ್ರು ಸೆಲ್ಪಿ ತೆಗೆದುಕೊಳ್ಳುವ ಹುಚ್ಚು ಸಾಮಾನ್ಯವಾಗಿದೆ. 26 ವರ್ಷದ ನವವಾಹಿತೆಯೊಬ್ಬಳು ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸದಲ್ಲಿ ಗುಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಮಹಿಳೆ ಗುರುವಾರ ಸಂಜೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ನಡೆದಿದೆ. ಸೆಲ್ಫಿಗೆ ಪೋಸ್ ನೀಡುವಾಗ ಬಂದೂಕಿನಲ್ಲಿ ಗುಂಡುಗಳು ತುಂಬಿರುವುದು ರಾಧಿಕಾ ಗುಪ್ತಾ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ನಳಿಕೆಯನ್ನು ಎಳೆದಿದ್ದರು. ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಬಂದೂಕು ಮತ್ತು ಮೊಬೈಲ್ ಫೋನ್ ಅನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆ ಫೋನ್ ನಲ್ಲಿ ಗುಂಡು ಹಾರುವ ಕೆಲವೇ ಸೆಕೆಂಡುಗಳ ಮೊದಲು ತೆಗೆದುಕೊಂಡಿದ್ದ ಸೆಲ್ಫಿ ದೊರಕಿದೆ.

Reach Count: 
33797
Show Detail Screen Advertisement: 
Yes