Kshetra Samachara

Local News Subject: 
ಅಣ್ಣಿಗೇರಿ : ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 887 ನೇ ಜಯಂತಿ
City: 
Hubballi-Dharwad
Upload Image: 
PublicNext-497116-552820-Hubballi-Dharwad-Cultural-Activity-Others-node
Category: 
Cultural Activity
Others
Body: 

ಅಣ್ಣಿಗೇರಿ : ತಾಲೂಕಿನ ಶಲವಡಿ ಗ್ರಾಮದಲ್ಲಿ ಶನಿವಾರ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 887 ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ಮಂಜುನಾಥ್ ಹಡಪದ್ ಅವರು ಮಾತನಾಡಿ, ಕಳೆದ ಒಂಬತ್ತು ಶತಮಾನಗಳಿಂದ ಸತತ ಜನರ ಸೇವೆಯನ್ನು ಮಾಡುತ್ತಾ ಬಂದಿರುವಂತಹ ಹಡಪದ ಅಪ್ಪಣ್ಣನವರ ಸಮಾಜಕ್ಕೆ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ದೇವಸ್ಥಾನಗಳು ಇಲ್ಲಾ, ಹೀಗಾಗಿ ಸಮುದಾಯ ಭವನ ಕಟ್ಟಿಸಿಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಯಾವುದಾದರೂ ಒಂದು ಜಾಗೆಯನ್ನು ಸಮಾಜಕ್ಕೆ ಕೊಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳಲ್ಲಿ ಮನವಿ ಮಾಡಿಕೊಂಡಿದ್ದೆವು. ಈ ಮನವಿಯನ್ನು ಕೇಳಿದ ಅವರು ಜಾಗೆಯನ್ನು ಕೊಡುವುದಕ್ಕೆ ಒಪ್ಪಿಗೆಯನ್ನು ಕೊಟ್ಟಿದ್ದಾರೆ. ಸಮಾಜದ ಯಾವುದೇ ಕೆಲಸಗಳಾಗಲಿ ನಾವು ಅಡತಡೆ ಮಾಡದಂತೆ ಅವಕಾಶಗಳನ್ನು ಕೊಡುತ್ತೇವೆ ಎಂದು ತಿಳಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಪಾಲ್ಗೊಂಡಿದ್ದರು.

Reach Count: 
8724
Show Detail Screen Advertisement: 
Yes