Kshetra Samachara

Local News Subject: 
ಅಳ್ನಾವರ: ದಾಖಲೆಯ ಪುಷ್ಯ ಮಳೆಗೆ ಅಳ್ನಾವರ ತತ್ತರ,ಬೆನಚಿ ಹಳ್ಳ ಸಂಪೂರ್ಣ ನಾಶ
City: 
Hubballi-Dharwad
Video Thumbnail: 
PublicNext-497097-552747-Hubballi-Dharwad-Nature-node
Category: 
Nature
Body: 

ವರದಿ: ಮಹಾಂತೇಶ ಪಠಾಣಿ

ಅಳ್ನಾವರ: ಎಲ್ಲೆಡೆ ಮಳೆಯ ಪ್ರಮಾಣ ಹೆಚ್ಚಾಗಿದ್ದು ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ಭಾರಿ ಅನಾಹುತವನ್ನೇ ಸೃಷ್ಟಿಸಿದೆ.ಅಳ್ನಾವರ ದಿಂದ ಬೆನಚಿ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು,ಬೆನಚಿ ಸೇತುವೆ ಹಾಳಾಗಿ ಸಂಪರ್ಕ ಕಳೆದು ಕೊಂಡಿದೆ.

ಹುಲಿಕೇರಿಯ ಇಂದಿರಮ್ಮ ಕೆರೆಯ ನೀರು,ಅಳ್ನಾವರದ ಡೌಗಿನಾಲಾ ಹಳ್ಳದ ನೀರು ಎಲ್ಲವೂ ಬೆನಚಿ ಹಳ್ಳಕ್ಕೆ ಸೇರುವುದರಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಳ್ಳ ತುಂಬಿ ಹರಿದಿದೆ.ನೀರಿನ ಹೊಡೆತಕ್ಕೆ ಹಳ್ಳದ ಸೇತುವೆ ಹಾಳಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ.ಇಂದು ಮಳೆ ನಿಂತಿದ್ದು ಸೇತುವೆಯ ನೀರು ಕಡಿಮೆ ಆಗಿದೆ ಯಾದರು,ದ್ವಿಚಕ್ರ ವಾಹನ ಮಾತ್ರ ಸಂಚರಿಸಲು ರಸ್ತೆ ಇದೆ.ಮಳೆ ಆವಾಂತರಕ್ಕೆ ಸೇತುವೆ ಹಾಳಾಗಿದ್ದು ಸಂಚರಿಸಲು ಕಷ್ಟ ವಾಗಿದೆ.

Reach Count: 
28600
Show Detail Screen Advertisement: 
Yes