Public News

News Subject: 
ಕುಂದಗೋಳ: ಸರ್ಕಾರಿ ರಜೆ ತಿಳಿಯದೆ ಕಿಟ್'ಗಾಗಿ ಬಂದ ಕಾರ್ಮಿಕರು ಬರಿಗೈಲಿ ವಾಪಾಸ್
Video Thumbnail: 
PublicNext--552722--node-nid
Category: 
Infrastructure
Health & Fitness
COVID
Body: 

ಕುಂದಗೋಳ: ಕೊರೊನಾ ಸಂಕಷ್ಟದ ಕಾರ್ಮಿಕರಿಗೆ ನೀಡುತ್ತಿರುವ ದಿನಸಿ ಕಿಟ್ ಜಾತ್ರೆ ಇವತ್ತು ಮತ್ತೋಂದು ಅವಾಂತರ ಮಾಡಿದ್ದು, ಕಿಟ್ ಪಡೆಯಲು ಇಂದು ನಾಲ್ಕನೇ ಶನಿವಾರ ಸರ್ಕಾರಿ ರಜೆ ಎಂದು ತಿಳಿಯದೇ ಹಳ್ಳಿಗಳಿಂದ ಪಟ್ಟಣಕ್ಕೆ ಬಂದ್ ಕಾರ್ಮಿಕರು ಸರದಿ ಸಾಲಲ್ಲಿ ನಿಂತು ಮನೆಗೆ ವಾಪಾಸ್ಸಾದರು.

ಕಳೆದ ಎರೆಡು ದಿನಗಳಿಂದ ಮಾನಪ್ಪನ ಪ್ಲಾಟ್'ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕಾರ್ಮಿಕರಿಗೆ ಕಿಟ್ ನಡೆದಿದ್ದು ಇಂದು ನಾಲ್ಕನೇ ಶನಿವಾರ ನಾಳೆ ಭಾನುವಾರ ರಜೆ ಮರಳಿ ಸೋಮವಾರ ಕಿಟ್ ನೀಡುವುದಾಗಿ ಅಧಿಕಾರಿಗಳು ತಿಳಿಸಿ ಇಂದು ಸ್ಥಳಕ್ಕೆ ಹಾಜರಾಗಿಲ್ಲ.

ಆದ್ರೇ, ಈ ಹಳ್ಳಿಗಳಲ್ಲಿ ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರು ಇವತ್ತು ಕಿಟ್ ಕೊಡುತ್ತಾರೆ ಎಂದು ತಿಳಿದು ಒಂದು ಗಂಟೆ ಕಾಲ ಸಾಲಲ್ಲಿ ನಿಂತು ಕಾಯ್ದು ಪೊಲೀಸರು ಬಂದು ಇವತ್ತು ರಜೆ ಎಂಬ ವಿಷಯ ತಿಳಿಸಿದ ಮೇಲೆ ಬರಿಗೈಲಿ ಮನೆಗೆ ತೆರಳಿದ್ದಾರೆ.

Reach Count: 
47949
Show Detail Screen Advertisement: 
Yes