Public News

News Subject: 
ಚಿತ್ರದುರ್ಗ: ಮಾಜಿ ಸಚಿವ ಸುಧಾಕರ್ ಗೆ ಬದ್ಧತೆ ಇದ್ದಿದ್ದರೆ ಕಡತಗಳ ಹಿಂದೆ ಓಡುತ್ತಿದ್ದರು : ಕೆ. ಪೂರ್ಣಿಮಾ
Video Thumbnail: 
PublicNext--552696--node-nid
Category: 
Politics
Body: 

ಚಿತ್ರದುರ್ಗ : ಹಿರಿಯೂರಿನ ಮಾಜಿ ಸಚಿವ ಡಿ. ಸುಧಾಕರ್ ಅವರಿಗೆ ಐತಿಹಾಸಿಕ ಧರ್ಮಪುರ ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಬದ್ಧತೆ ಇದ್ದಿದ್ದರೆ ಕಡತಗಳ ಕೆಲಸದ ಹಿಂದೆ ಓಡಬೇಕಿತ್ತು, ಅವರು ಅ ಕೆಲಸ ಮಾಡಲಿಲ್ಲ , ಮೊದಲು ಭದ್ರಾ ದಿಂದ ವಿವಿ ಸಾಗರಕ್ಕೆ 5 ಟಿಎಂಸಿ ನೀರು ಹಂಚಿಕೆಗೊಂಡಿದ್ದನ್ನು ಅಂದಿನ ಶಾಸಕರಾಗಿ ಯಾಕೆ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು. ಅಂದಿನ ನೀರಿನ ಹಂಚಿಕೆ ವಿಚಾರಗಳ ಸಭೆಗಳಿಗೆ ಅವರು ಭಾಗವಹಿಸಲಿಲ್ಲ ಆಗಾಗಿ ಅವರಿಗೆ ಇದರ ಬಗ್ಗೆ ಮಾತಾಡಲು ನೈತಿಕತೆ ಇಲ್ಲ, ಮುಂದಿನ ದಿನಗಳಲ್ಲಿ ಹಲವಾರು ವಿಷಯಗಳನ್ನು ರಾಜಕೀಯ ಸಭೆಗಳಲ್ಲಿ ಅದಕ್ಕೆ ಏನು ಉತ್ತರ ಕೊಡಬೇಕೋ ನಾನು ಕೊಡುತ್ತೇನೆ ಎಂದು ಶಾಸಕಿ ಕೆ ಪೂರ್ಣಿಮಾ ತಿಳಿಸಿದರು. ನನಗೆ ನನ್ನ ಕ್ಷೇತ್ರದಲ್ಲಿ ಬದ್ಧತೆಯಿಂದ ಅಭಿವೃದ್ಧಿ ಕೆಲಸ ಮಾಡುತ್ತೇನೆಂದರು.

ಸಿಎಂ ಬಿಎಸ್ವೈ ಸಚಿವ ಸಂಪುಟ ಸಭೆಯಲ್ಲಿ ಧರ್ಮಪುರ ಕೆರೆಗೆ ನೀರು ಹರಿಸಲು ಅನುಮೋದನೆ ಸಿಕ್ಕಿದ್ದು ವಿಚಾರವಾಗಿ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಶಾಸಕಿ ಕೆ ಪೂರ್ಣಿಮಾ "ಐತಿಹಾಸಿಕ ಧರ್ಮಪುರ ಕೆರೆಗೆ ನೀರು ಹರಿಸಲು ನೂರಾರು ವರ್ಷಗಳ ಹೋರಾಟ ಮಾಡಿಕೊಂಡು ಬಂದಿದ್ದರು. ಆಗಾಗಿ ನನ್ನ ಕರ್ತವ್ಯ ನಾನು ನೀರಿನ ವಿಚಾರದಲ್ಲಿ ಬದ್ಧತೆ ತೋರಿಸಿದ್ದೆನೆ ಎಂದರು". ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಮುಂಬರುವ ಆಗಸ್ಟ್ ತಿಂಗಳಲ್ಲಿ ಕೆರೆಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಧರ್ಮಪುರ ಕೆರೆಗೆ ನೀರು ಹರಿಸಲು ಒಟ್ಟಿಗೆ 90 ಕೋಟಿ ಅನುಮೋದನೆ ನೀಡಲಾಗಿದೆ. ಮೊದಲ ಹಂತದ ಕಾಮಗಾರಿಗೆ 40 ಕೋಟಿ ರೂಪಾಯಿ ಬಿಡುಗಡೆಯಾಗುತ್ತದೆ, ತದನಂತರ ಕಾಮಗಾರಿಗೆ ಉಳಿದ ಹಣವನ್ನು ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳ್ಳಲಿದೆ. ಧರ್ಮಪುರ ಭಾಗದ ಜನರಲ್ಲಿ ಮಂದಹಾಸ ಮೂಡಿದೆ ಎಂದು ಶಾಸಕರು ಹೇಳಿದರು. ಕ್ಷೇತ್ರದಲ್ಲಿ ಹಲವಾರು ಘಟಾನುಘಟಿ ನಾಯಕರಿದ್ದರು ನೂರಾರು ವರ್ಷಗಳಿಂದ ಆಗದ ಕೆಲಸ ಈ ಶಾಸಕರು ಕೆಲಸ ಮಾಡಲು ಹೇಗೆ ಸಾಧ್ಯ, ಡಿಪಿಆರ್ ಆಗಿದಿಯಾ, ಆರ್ಥಿಕ ಹಣ ಬಿಡುಗಡೆ ಆಗಿದಿಯಾ, ಬೇರೆ ಮಂತ್ರಿಮಂಡಲ ಬಂದರೆ ಬದಲಾವಣೆ ಯೋಜನೆ ರದ್ದಾಗುತ್ತಾ ಹಲವಾರು ಪ್ರಶ್ನೆಗಳು ಉದ್ಭವಿಸುವುದು ಸಹಜ, ಆದರೆ ಒಂದು ಮುಖ್ಯಮಂತ್ರಿ, ಒಂದು ಮಂತ್ರಿಮಂಡಲದಲ್ಲಿ ಅನುಮೋದನೆ ಗೊಂಡಿರುವುದು ಯಾವುದೇ ಕಾರಣಕ್ಕೂ ನೀರಾವರಿ ಯೋಜನೆಗಳನ್ನು ರದ್ದುಮಾಡುವುದಿಲ್ಲ ಎಂದು ಅಭಿವೃದ್ಧಿ ವಿಷಯದಲ್ಲಿ ಟೀಕೆ ಮಾಡುವವರಿಗೆ ಉತ್ತರ ನೀಡಿದರು.

ಯಾವುದೇ ಯೋಜನೆಗಳನ್ನು ಶ್ರಮ ಪಟ್ಟು ಕೆಲಸ ಮಾಡುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದರು. ಧರ್ಮಪುರ ಕೆರೆಗೆ ನೀರು ಹರಿಸಲು ಅಧಿಕಾರಿಗಳು ಬದ್ಧತೆ ತೋರಿಸಿದ್ದು, ಅವರು ಸಹ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು. ನಮ್ಮ ತಂದೆ ದಿವಂಗತ ಎ. ಕೃಷ್ಣಪ್ಪನವರು ರೈತರ ಸಂಕಷ್ಟಗಳನ್ನು ಅರಿತು ಕೆಲಸ ಮಾಡುತಿದ್ದರು ತಂದೆಯ ಹಾದಿಯಲ್ಲಿ ನಾನು ಸಹ ಸಾಗುತಿದ್ದೆನೆ ಆಗಾಗಿ ಸಿಎಂ ಬಿಎಸ್ವೈ ಬಳಿ ತೆರಳಿ ನನ್ನ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಚರ್ಚಿಸಿದ್ದೆ ಅದಕ್ಕೆ ಪ್ರೋತ್ಸಾಹ ನೀಡಿದರು. ಅವರು ಕೆಲಸ ಪ್ರಾರಂಭಿಸಲು ಅನುದಾನ ನೀಡಿದ್ದಾರೆ. ಅವರಿಗೆ, ನೀರಿವಾರಿ ಸಚಿವರಿಗೆ, ಈ ಭಾಗದ ಸಂಸದರಿಗೆ ಧನ್ಯವಾದಗಳನ್ನಾ ಅರ್ಪಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಧರ್ಮಪುರ ತಾಲೂಕು ಕೇಂದ್ರವನ್ನಾಗಿ ಮಾಡುವ ಗಮನ ಹರಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು. ಸಭೆಯಲ್ಲಿ ಧರ್ಮಪುರ ಹೋಬಳಿಯ ಭಾಗದ ರೈತರು ಹಾಗೂ ನೀರಿವಾರಿ ಹೋರಾಟಗಾರರು ಶಾಸಕರಿಗೆ ಸನ್ಮಾನ ಮಾಡಿ ಗೌರವಿಸಿದರು.

ಹೆ.ಆರ್. ತಿಮ್ಮಯ್ಯ, ಶಿವಕುಮಾರ್, ಜಿ.ಪ‌. ಮಾಜಿ ಅಧ್ಯಕ್ಷ ರಘುನಾಥ್ ಮಾತನಾಡಿದರು. ಬಬ್ಬೂರು ಸುರೇಶ್, ಸಿದ್ದರಾಮಣ್ಣ, ದ್ಯಾಮೇಗೌಡ, ಶಿವಣ್ಣ, ಆನಂದ ಶೆಟ್ಟಿ, ಉಗ್ರಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Reach Count: 
24417
Show Detail Screen Advertisement: 
Yes