Public News

News Subject: 
ಯಾದಗಿರಿ...Exclusive ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ತಕರಾರು..ಪ್ರತಿಭಟನೆಗೆ ಕುಳಿತ ಜನರು.!
Video Thumbnail: 
PublicNext-497053-552618-Infrastructure-Human-Stories-node
Category: 
Infrastructure
Human Stories
Body: 

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹದನೂರು ಗ್ರಾಮದಲ್ಲಿ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವ ವಿಚಾರವಾಗಿ ಇಂದು ಪರಿಶಿಷ್ಟ ಜಾತಿ ಸಮುದಾಯದವರು ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಇವತ್ತು ಎಸ್ಸಿ ವಾರ್ಡ್ ನಲ್ಲಿ ಮುದಕಪ್ಪ ಎಂಬ ವೃದ್ಧ ಮೃತಪಟ್ಟಿದ್ದು, ಸ್ಮಶಾನದಲ್ಲಿ ಶವ ಇಡಲು ಗ್ರಾಮದ ರಾಮನಗೌಡ ಎಂಬುವವರು ತಕರಾರು ಮಾಡುತ್ತಿದ್ದಾರೆ ಅಂತಾ ಶವದ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಇನ್ನು ಈ ರುದ್ರಭೂಮಿಯ ಅರ್ಧದಷ್ಟು ಜಾಗ ರಾಮನಗೌಡ ಅವರ ಹೆಸ್ರಲ್ಲಿದ್ದು, ಮೊದಲಿನಿಂದಲೂ ಅದೇ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಾ ಬಂದಿದ್ದು, ಈಗಲೂ ನಮಗೆ ಅಲ್ಲೇ ಜಾಗ ಕೊಡಿ ಅಂತಾ ಪರಿಶಿಷ್ಟ ಜಾತಿ ಸಮುದಾಯವರು ಪಟ್ಟು ಹಿಡಿದ ದೃಶ್ಯ ಕಂಡು ಬಂತು.

ಇನ್ನೂ ಇವರಿಗೆ ಸರ್ಕಾರದಿಂದ ಜಾಗ ಗುರುತಿಸಿಲ್ಲ. ಮೊದಲಿನಿಂದಲೂ ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಾ ಬರುತ್ತಿದ್ದು, ಈಗ ಅಲ್ಲೇ ಶವ ಹೂಳಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಈ ಗ್ರಾಮದಲ್ಲಿ ಮಾನವೀಯತೆ ಅನ್ನೋದೇ ಮರೆತು ಹೋಯ್ತಾ ಎಂಬ ಪ್ರಶೆ ಕಾಡುತ್ತಿದ್ದು, ಅಲ್ಲದೇ ಸಂಭಂದಪಟ್ಟ ಅಧಿಕಾರಿಗಳು ರುದ್ರಭೂಮಿ ಜಾಗವು ಗುರುತಿಸಿಲ್ಲ. ಶವ ಮನೆಯಲ್ಲೇ ಇಟ್ಟುಕೊಂಡು ಕುಳಿತಿರುವ ಅಮಾನವೀಯ ಘಟನೆ ಮಾತ್ರ ಸಮಾಜ ತಲೆ ತಗ್ಗೆಸುವಂತಿದೆ.

ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Reach Count: 
44100
Show Detail Screen Advertisement: 
Yes