Kshetra Samachara

Local News Subject: 
ಹುಬ್ಬಳ್ಳಿ: ರೈಲ್ವೆ ದರ ಹೆಚ್ಚಳ! ಕಂಗಾಲಾದ ಪ್ರಯಾಣಿಕರು, ಕಾರ್ಮಿಕರು
City: 
Hubballi-Dharwad
Video Thumbnail: 
PublicNext--552601--node-nid
Category: 
Infrastructure
Body: 

ಹುಬ್ಬಳ್ಳಿ: ತೈಲ ಬೆಲೆ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ, ಇದೀಗ ಬಡವರ ಸಾರಿಗೆ ಎಂದೇ ಕರೆಯಿಸಿಕೊಳ್ಳುವ ರೈಲ್ವೆ ಪ್ರಯಾಣದ ದರ ಕೂಡಾ ಹೆಚ್ಚಾಗಿದ್ದು, ದರ ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಹೌದು, ಮೊದಲೇ ಲಾಕ್ ಡೌನ್, ಕೊರೋನಾದಿಂದ ಹಲವಾರು ಜನರು ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಇದೀಗ ಕೋವಿಡ್ ಎರಡನೇ ತಗ್ಗಿದ ಬೆನ್ನಲ್ಲೇ ಸಾರಿಗೆ ಸಂಪರ್ಕ ಕೂಡಾ ಆರಂಭಗೊಂಡಿದ್ದು, ಅದರ ಜೊತೆಗೆ ರೈಲು ಸಂಚಾರವು ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಜನರು ಕೆಲಸ ಅರಿಸಿ ಪಟ್ಟಣಗಳತ್ತ ಮುಖ ಮಾಡುತ್ತಾ ಇದ್ದಾರೆ. ಆದರೆ ರೈಲುಗಳನ್ನು ಹೆಚ್ಚಾಗಿ ನಂಬಿ ಕೂಲಿ ಹಾಗೂ ಇನ್ನಿತರ ಕೆಲಸ ಅರಿಸಿ ಕಾರ್ಮಿಕರು, ನಿತ್ಯ ಜಿಲ್ಲೆಯ ಸುತ್ತಮುತ್ತಲಿನ ಊರುಗಳಿಂದ ಹುಬ್ಬಳ್ಳಿಗೆ ಆಗಮಿಸುವ ಜನರಿಗೆ ರೈಲು ಪ್ರಯಾಣದ ದರ ಕಂಗಾಲು ಮಾಡಿದೆ.

ಕೋವಿಡ್ ಮುಂಚೆ ಗುಡಗೇರಿಯಿಂದ ಹುಬ್ಬಳ್ಳಿಗೆ 10 ರೂ ದರವಿತ್ತು. ಇದೀಗ ಆ ದರ 30 ರೂ ಆಗಿದೆ. ಮೊದಲೇ ಕೋವಿಡ್‌ನಿಂದಾಗಿ ಅನೇಕ ಕೂಲಿ ಕಾರ್ಮಿಕರಿಗೆ ದುಡಿಮೆಯಿಲ್ಲ. ಹಿಂದೆ ಗಳಿಸಿದ ಆದಾಯದಲ್ಲಿಯೇ ಅಷ್ಟಿಷ್ಟು ಉಳಿಸಿಕೊಂಡು ಲಾಕ್‌ಡೌನ್‌ ಅವಧಿಯಲ್ಲಿ ಜೀವನ ನಡೆಸಿದ್ದರು. ಈಗ ಪ್ರಯಾಣದ ದರವೂ ಇಳಿಕೆಯಾಗದ ಕಾರಣ ಕಾರ್ಮಿಕರಿಗೆ ಹೊರೆಯಾಗಿದೆ.

ಈರಣ್ಣ ವಾಲಿಕಾರ,
ಪಬ್ಲಿಕ್ ನೆಕ್ಸ್ಟ್

Reach Count: 
40738
Show Detail Screen Advertisement: 
Yes