Kshetra Samachara

Local News Subject: 
ಮುಲ್ಕಿ: ಮಸೀದಿಯಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ
City: 
Udupi
Mangalore
Upload Image: 
PublicNext-497041-552578-Udupi-Mangalore-Human-Stories-node
Category: 
Human Stories
Body: 

ಮುಲ್ಕಿ; ಮುಲ್ಕಿ ಜುಮ್ಮಾ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಜ್ ಗೆ ಬರುವ ವೇಳೆ ಮಸೀದಿಯ ಒಳಗಡೆ ಬಿದ್ದು ಸಿಕ್ಕಿದ ಎಂಟು ಫವನ್ ಚಿನ್ನದ ಸರವನ್ನು ಮುಲ್ಕಿ ಕೊಲ್ನಾಡಿನ ಪೂತ ಪ್ಯಾಮಿಲಿಯ ಉಮರುಲ್ ಫಾರೂಕ್ ಎಂಬವರು ನ ಮಸೀದಿಯ ಧರ್ಮಗುರು ಎಸ್ ಬಿ ದಾರಿಮಿಯವರಿಗೆ ತಂದು ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನಂತರ ಜುಮಾ ಭಾಷಣದಲ್ಲಿ ದಾರಿಮಿಯವರು ಚಿನ್ನದ ಸರ ದ ನೈಜ ವಾರಿಸುದಾರರು ಇದ್ದರೆ ತಿಳಿಸ ಬೇಕಾಗಿ ಹೇಳಿದ್ದರು.

ವಿಷಯ ತಿಳಿದು ದಾವಿಸಿ ಬಂದ ಕಾಟಿಪಳ್ಳದ ಮಹಿಳೆಯೊಬ್ಬರು ಸರದ ಬಗ್ಗೆ ಗುರುತು ತಿಳಿಸಿ ಚಿನ್ನದ ಸರ ನೀಡಲಾಯಿತು

ಚಿನ್ನದ ಸರ ಹಿಂತಿರುಗಿಸಿದ ಫಾರೂಕುರವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದೇ ಸಂಧರ್ಭದಲ್ಲಿ ಮಾತನಾಡಿದ ಧರ್ಮಗುರು ಎಸ್ ಬಿ ದಾರಿಮಿ ಫಾರೂಕ್ ರ ಪ್ರಾಮಾಣಿಕತೆಯ ಮಾದರಿಯನ್ನು ಪ್ರತಿಯೊಬ್ಬರು ಅನುಕರಿಸ ಬೇಕಾಗಿದೆ.
ಪುಣ್ಯ ಕೆಲಸದಿಂದ ಬದುಕಲ್ಲಿ ಶಾಂತಿ ನೆಮ್ಮದಿ ದೊರಕುವುದಲ್ಲದೇ ಪರಲೋಕದಲ್ಲೂ ಇದಕ್ಕೆ ಬಹಳಷ್ಟು ಪ್ರತಿಫಲ ಸಿಗಲಿದೆ ಎಂದರು.

Reach Count: 
6538
Show Detail Screen Advertisement: 
Yes