Public News

News Subject: 
ಯಾದಗಿರಿ: ನದಿ ದಡಕ್ಕೆ ಯಾರೂ ಹೋಗದಂತೆ ಹಳ್ಳಿಗಳಲ್ಲಿ ಡಂಗೂರ.!
Video Thumbnail: 
PublicNext--552464--node-nid
Category: 
Nature
Government
Body: 

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಹರಿವು ಹೆಚ್ಚಾಗಿದೆ.
ಸುಮಾರು 3 ಲಕ್ಷ ಕ್ಯೂಸೆಕ್ ನೀರು ಕೃಷ್ಣ ನದಿಗೆ ಅಪಾಯದ ಮಟ್ಟ ತುಂಬಿ ಹರಿಯುತ್ತಿದೆ.ನದಿ ಪಾತ್ರದಲ್ಲಿರುವ ಹಳ್ಳಿಗಳಿಗೆ ಪ್ರವಾಹದ ಭೀತಿ ಉಂಟಾಗಿದ್ದು, 16 ಗ್ರಾಮದ ಜನರಿಗೆ ಆತಂಕ ಹೆಚ್ಚಾಗಿದೆ.

ಇನ್ನು ನದಿ ದಡಕ್ಕೆ ಯಾರು ಹೋಗದಂತೆ ಮುನ್ನೇಚರಿಕೆವಹಿಸಿದ್ದು, ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸಲಾಗ್ತಿದೆ.ಪಂಪ್ ಸೆಟ್, ಪೈಪ್ ಹಾಗೂ ಯಾವುದೇ ಕೃಷಿ ಉಪಕರಣಗಳಿಗಾಗಿ ನದಿ ದಡಕ್ಕೆ ಹೋಗಬಾರದೆಂದು ಡಂಗೂರು ಹೊಡೆಯುತ್ತಿದ್ದಾರೆ.

ಇನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರೀಯಾ ಅವರು ಮಾತನಾಡಿ, ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು
ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಇನ್ನೂ ಪ್ರವಾಹ ಹೆಚ್ಚಾದರೆ ನದಿ ತೀರದ 16 ಗ್ರಾಮಗಳ ಜನರಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲದೇ 13 ಕಾಳಜಿ ಕೇಂದ್ರ ಆರಂಭ ಮಾಡಲಾಗುತ್ತದೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.

ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Reach Count: 
34858
Show Detail Screen Advertisement: 
Yes