Kshetra Samachara

Local News Subject: 
ನವಲಗುಂದ : ಮಳೆರಾಯನ ಆರ್ಭಟಕ್ಕೆ ರೈತರು ತತ್ತರ, ಸ್ಪಂದಿಸಬೇಕಿದೆ ಅಧಿಕಾರಿಗಳು
City: 
Hubballi-Dharwad
Video Thumbnail: 
PublicNext--552439--node-nid
Category: 
Nature
Body: 

ನವಲಗುಂದ : ಬಿಟ್ಟು ಬಿಡದೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಬಾರಿ ಮಳೆ ನವಲಗುಂದ ತಾಲ್ಲೂಕಿನಾದ್ಯಂತ ಸಹ ಮುಂದುವರೆದಿದೆ. ನೆನ್ನೆ ತಡರಾತ್ರಿ ಸುರಿದಿದ್ದ ಮಳೆಯಿಂದ ಬೆಣ್ಣೆ ಹಳ್ಳ ಸೇರಿದಂತೆ ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು ಒಂದೆಡೆ ಹಳ್ಳಗಳು ತುಂಬಿ ಹರಿಯುತ್ತಿದ್ರೆ ಹಳ್ಳ ಮತ್ತು ನದಿ ದಡದಲ್ಲಿರುವ ರೈತರ ಜಮೀನಿಗೆ ನೀರು ನುಗ್ಗುವ ಆತಂಕ, ಇನ್ನೊಂದೆಡೆ ಸುರಿದ ಮಳೆಗೆ ರೈತರ ಜಮೀನುಗಳು ಹಳ್ಳದಂತಾಗಿವೆ. ಹೊಲಗಳಲ್ಲಿ ನೀರು ಹರಿಯುತ್ತಿವೆ. ಇದರಿಂದ ಈ ಬಾರಿ ರೈತ ಬೆಳೆದ ಗೋವಿನ ಜೋಳ ಮತ್ತು ಹೆಸರು ಸಂಪೂರ್ಣ ಮಳೆಗೆ ಆಹುತಿಯಾಗಿವೆ. ರೈತ ಕಷ್ಟ ಪಟ್ಟು ಬೆಳೆದ ಬೆಳೆ ನಾಶವಾಗುತ್ತಿರೋದನ್ನ ನೋಡಿ ಕಂಗಲಾಗಿದ್ದಾನೆ. ಇನ್ನು ಈ ಬಗ್ಗೆ ಯುವ ರೈತ ಹೋರಾಟಗಾರರಾದ ಮೈಲಾರಪ್ಪ ವೈದ್ಯ ಅವರು ಸಹ ಈಗಾಗಲೇ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲಾ ಮತ್ತು ಸ್ಥಳೀಯ ಶಾಸಕರು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ ಎಂದು ಆರೋಪಿಸಿದ್ದಾರೆ.

ಪ್ರಕೃತಿ ಆಟಕ್ಕೆ ಈಗ ರೈತರು ಬಲಿ ಪಶುಗಳಾಗುವ ಪರಿಸ್ಥಿತಿ ಬಂದೋದಗಿದ್ದು, ಕೂಡಲೇ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕಿದೆ.

ವರದಿಗಾರ ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Reach Count: 
18926
Show Detail Screen Advertisement: 
Yes