Public News

News Subject: 
ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ!
Upload Image: 
PublicNext--552336--node-nid
Category: 
Business
Body: 

ದೆಹಲಿ: ತೈಲ ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಸದ್ಯ ಬೆಲೆ ಎರಿಕೆಯ ಬಿಸಿ ಸದ್ಯಕ್ಕೆ ತಟ್ಟಿಲ್ಲ. ದಾಖಲೆಯ ದರದಲ್ಲಿಯೇ ಮುಂದುವರೆದಿದೆ.

ಸರ್ಕಾರಿ ತೈಲ ಕಂಪನಿಗಳು ಇಂದು (ಜುಲೈ 24 , ಶನಿವಾರ) ಕೂಡ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹೀಗಾಗಿ ಸತತ ಏಳನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Diesel Price) ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತದ ನಡುವೆ, ದೇಶೀಯ ತೈಲ ಕಂಪನಿಗಳು ಇಂಧನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ. ಕಚ್ಚಾ ತೈಲ ಬೆಲೆಗಳ ಇಳಿಮುಖ ಪ್ರವೃತ್ತಿ ಮುಂದುವರಿದರೆ, ಸಾಮಾನ್ಯ ಜನರು ಇಂಧನದ ಬೆಲೆಯಲ್ಲಿ(Fuel Price) ದೊಡ್ಡ ಪರಿಹಾರವನ್ನು ಕಾಣಬಹುದು ಎಂದು ನಂಬಲಾಗಿತ್ತು. ಆದಾಗ್ಯೂ, ದೇಶಾದ್ಯಂತ ಇಂಧನ ಬೆಲೆಗಳು ಇನ್ನೂ ದಾಖಲೆಯ ಮಟ್ಟದಲ್ಲಿಯೇ ಉಳಿದಿವೆ.

ರಾಜಸ್ಥಾನದ ಗಂಗನಗರದಲ್ಲಿ ಪೆಟ್ರೋಲ್ ಬೆಲೆ 113.21 ರೂ. ಮತ್ತು ಡೀಸೆಲ್ 103.15 ರೂಪಾಯಿಯಾಗಿದೆ. ಮಧ್ಯಪ್ರದೇಶದ ಅನುಪ್ಪೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 112.78 ರೂಪಾಯಿ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 101.15 ರೂಪಾಯಿಯಾಗಿದೆ.

Reach Count: 
11968
Show Detail Screen Advertisement: 
Yes