Public News

News Subject: 
ನಾನು ಪೆಗಾಸಸ್ ಗೂಢಚರ್ಯೆಯ ಸಂಭಾವ್ಯ ಗುರಿ ಅಲ್ಲ: ರಾಹುಲ್ ಗಾಂಧಿ
Upload Image: 
PublicNext--552312--node-nid
Category: 
Politics
Body: 

ದೆಹಲಿ : 'ಇದು ರಾಹುಲ್ ಗಾಂಧಿಯ ಖಾಸಗಿತನದ ವಿಷಯವಲ್ಲ. ಬದಲಿಗೆ ಜನರ ಧ್ವನಿಯನ್ನು ಹತ್ತಿಕ್ಕುತ್ತಿರುವ ವಿಚಾರ. ನಾನು ಪೆಗಾಸಸ್ ಗೂಢಚರ್ಯೆಯ ಸಂಭಾವ್ಯ ಗುರಿ ಅಲ್ಲ. ನನ್ನ ಫೋನ್ ಗಳನ್ನು ಕದ್ದಾಲಿಸುತ್ತಿರುವುದು ನಿಜ' ಎಂದು ಅವರು ಆರೋಪಿಸಿದ್ದಾರೆ.

'ನನ್ನ ಎಲ್ಲಾ ಫೋನ್ ಗಳನ್ನು ಕದ್ದಾಲಿಸಲಾಗುತ್ತಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ನನಗೆ ಮತ್ತು ನನ್ನ ಸ್ನೇಹಿತರಿಗೆ ಕರೆ ಮಾಡುತ್ತಾರೆ. ನಿಮ್ಮ ಫೋನ್ ಗಳನ್ನು ಕದ್ದಾಲಿಸುತ್ತಿದ್ದೇವೆ, ಎಚ್ಚರಿಕೆಯಿಂದಿರಿ ಎಂದು ಮಾಹಿತಿ ನೀಡುತ್ತಾರೆ.

ನನ್ನ ಫೋನ್ ಅನ್ನು ಕದ್ದಾಲಿಸುತ್ತಿಲ್ಲ ಎಂಬ ಭ್ರಮೆಯಲ್ಲಿ ನಾನು ಇಲ್ಲ' ಎಂದು ರಾಹುಲ್ ಹೇಳಿದ್ದಾರೆ.

'ಬಿಜೆಪಿ ಸರ್ಕಾರವು ಯಾರ ಫೋನನ್ನೂ ಕಾನೂನುಬಾಹಿರವಾಗಿ ಕದ್ದಾಲಿಸಿಲ್ಲ, ಗೂಢಚರ್ಯೆ ನಡೆಸಿಲ್ಲ. ರಾಹುಲ್ ಗಾಂಧಿ ಅವರು ತಮ್ಮ ಫೋನ್ ಅನ್ನು ಕದ್ದಾಲಿಸಲಾಗಿದೆ ಎಂದಿದ್ದಾರೆ. ಅದು ನಿಜವೇ ಆಗಿದ್ದರೆ ಅವರು ತಮ್ಮ ಫೋನ್ ಅನ್ನು ತನಿಖಾ ಸಂಸ್ಥೆಗೆ ಒಪ್ಪಿಸಲಿ. ಭಾರತೀಯ ದಂಡ ಸಂಹಿತೆಯ ನಿಯಮಗಳ ಪ್ರಕಾರ ತನಿಖೆ ನಡೆಯಲಿದೆ' ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್ ಸವಾಲು ಹಾಕಿದ್ದಾರೆ.

Reach Count: 
27501
Show Detail Screen Advertisement: 
Yes