Public News

News Subject: 
ಮೊಮ್ಮಗಳು ಜೀನ್ಸ್ ಪ್ಯಾಂಟ್ ಹಾಕ್ತಾಳೆಂಬ ಕಾರಣಕ್ಕೆ ಕೊಂದೇ ಬಿಟ್ಟರು
Video Thumbnail: 
PublicNext--552213--node-nid
Category: 
Crime
Body: 

ಡಿಯೋರಿಯಾ(ಉತ್ತರ ಪ್ರದೇಶ): ಜೀನ್ಸ್ ಪ್ಯಾಂಟ್ ಹಾಕ್ತಾಳೆ ಎಂಬ ಕಾರಣಕ್ಕೆ ಬಾಲಕಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಸೇತುವೆಯ ಕೆಳಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ 17 ವರ್ಷದ ಬಾಲಕಿಯ ದೇಹವು ಒಂದು ಸಂಚಲವನ್ನು ಸೃಷ್ಟಿಸಿತ್ತು. ಬಾಲಕಿಯ ಜೀವನಶೈಲಿಯನ್ನು ಇಷ್ಟಪಡದ ಬಾಲಕಿಯ ಅಜ್ಜ ಮತ್ತು ಚಿಕ್ಕಪ್ಪ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಭಂದಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕಿ ತನ್ನ ತಾಯಿಯೊಂದಿಗೆ ಇತ್ತೀಚೆಗೆ ಡಿಯೋರಿಯಾ ಜಿಲ್ಲೆಯ ತನ್ನ ತಾತನ ಮನೆಗೆ ಬಂದಿದ್ದಳು. ಬಾಲಕಿಯ ತಂದೆ ಪಂಜಾಬ್‌ನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

Reach Count: 
77069
Show Detail Screen Advertisement: 
Yes