Public News

News Subject: 
ಶಾಲೆಯ ಶೌಚಾಲಯದಲ್ಲಿ 7ರ ಬಾಲೆಯ ಮೇಲೆ ರೇಪ್- ಆರೋಪಿ ಅರೆಸ್ಟ್
Upload Image: 
PublicNext--515305--node-nid
Category: 
Crime
Body: 

ಮುಂಬೈ: ಕಾಮುಕನೋರ್ವ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಗ್ಪುರ ಜಿಲ್ಲೆಯ ಕೊಂಢಸಾವಲಿ ಗ್ರಾಮದ ಅಂಕುಶ್ ಭೋಸ್ಕರ್ (25) ಬಂಧಿತ ಆರೋಪಿ. ಅಂಕುಶ್ ಸ್ಥಳೀಯ ನಿವಾಸಿಯಾಗಿದ್ದು, ಬಾಲಕಿಗೆ ಪರಿಚಿತನಾಗಿದ್ದಾನೆ. ಶನಿವಾರ ಬಾಲಕಿ ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದಳು. ಆರೋಪಿಯು ಬಲವಂತವಾಗಿ ಆಕೆಯನ್ನು ಶೌಚಾಲಯಕ್ಕೆ ಎಳೆದೊಯ್ದಿದ್ದಾನೆ. ಅಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಈ ವಿಷಯವನ್ನು ಯಾರಿಗೂ ತಿಳಿಸದಂತೆ ಆರೋಪಿಯು ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಾನೆ. ಇದೇ ಮಾರ್ಗವಾಗಿ ಹೋಗುತ್ತಿದ್ದ ಸ್ಥಳೀಯ ವ್ಯಕ್ತಿ ಬಾಲಕಿಯ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಹೋಗಿ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಹಳ್ಳಿಗರಿಂದ ಮಾಹಿತಿಯನ್ನು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

Reach Count: 
46566