Kshetra Samachara

Local News Subject: 
ಕುಂದಗೋಳ : ಸಾಮಾನ್ಯ ಸಭೆ ಸಮಗ್ರ ವರದಿ ಆಲಿಸಿದ ಆಡಳಿತಾಧಿಕಾರಿ
City: 
Hubballi-Dharwad
Video Thumbnail: 
PublicNext--515266--node-nid
Category: 
Government
Body: 

ಕುಂದಗೋಳ : ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅನುಪಸ್ಥಿತಿಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ದೊಡ್ಡ ಬಸವರಾಜ ನೇತೃತ್ವದಲ್ಲಿ ಇಂದು ಸಾಮಾನ್ಯ ಸಭೆ ನೆರವೇರಿತು.

ಕುಂದಗೋಳ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಕೊರೊನಾ ಹತೋಟಿ ಸೇರಿದಂತೆ ಆಯಾ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಂಡು ಚಟುವಟಿಕೆಗಳ ಮಾಹಿತಿಯನ್ನು ತಾಪಂ ಸಭೆಯಲ್ಲಿ ಆಡಳಿತಾಧಿಕಾರಿಗಳ ಮುಂದಿಟ್ಟರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕೈಗೊಂಡ ಕೊರೊನಾ ಹತೋಟಿ ಮತ್ತು ಅಂಗನವಾಡಿ ಆಹಾರ ಸಾಮಗ್ರಿ ಸಮಗ್ರ ವಿವರಣೆ ನೀಡಿದರು.

ಒಂದು ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಒಂದೊಂದು ಇಲಾಖೆ ಮಾಹಿತಿಯನ್ನು ಆಡಳಿತಾಧಿಕಾರಿ ತಾಪಂ ಇಒ ಸಮಗ್ರವಾಗಿ ಆಲಿಸಿ ಅವರವರ ಕಡತಗಳನ್ನು ಪರಿಶೀಲನೆಗೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ, ಹಾಗೂ ತಾಪಂ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

Reach Count: 
33270