Kshetra Samachara

Local News Subject: 
ಧಾರವಾಡದ ವಿವಿಧ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತ್ಯೇಕ ಪ್ರತಿಭಟನೆ
City: 
Hubballi-Dharwad
Video Thumbnail: 
PublicNext--511910--node-nid
Category: 
Politics
Body: 

ಧಾರವಾಡ: ಧಾರವಾಡದ ವಿವಿಧ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಧಾರವಾಡದ ಬಾಗಲಕೋಟ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ, ವಿದ್ಯಾಗಿರಿಯಲ್ಲಿರುವ ರಿಲಾಯನ್ಸ್ ಪೆಟ್ರೋಲ್ ಬಂಕ್ ಮುಂದೆ ನಾಗರಾಜ ಗೌರಿ ನೇತೃತ್ವದಲ್ಲಿ ಹಾಗೂ ನರೇಗಲ್ ಪೆಟ್ರೋಲ್ ಬಂಕ್ ಮುಂದೆ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಾಗರಾಜ ಗೌರಿ ಹಾಗೂ ಅವರ ಬೆಂಬಲಿಗರು ಸೈಕಲ್ ಏರಿ ಬರುವ ಮೂಲಕ ಪ್ರತಿಭಟನೆ ನಡೆಸಿದರು. ಇನ್ನು ರಾಬರ್ಟ್ ದದ್ದಾಪುರಿ ಹಾಗೂ ಅವರ ಬೆಂಬಲಿಗರು ಕೇಂದ್ರ ಸರ್ಕಾರದ ವಿರುದ್ಧ ಬಾಗಲಕೋಟ ಪೆಟ್ರೋಲ್ ಬಂಕ್ ಮುಂದೆ ವಾಗ್ದಾಳಿ ನಡೆಸಿದರು.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ನಗರದ ಅನೇಕ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಮುಂದೆ ತಾಲೂಕಾಮಟ್ಟ, ಜಿಲ್ಲಾ ಪಂಚಾಯ್ತಿ ಮಟ್ಟ, ಗ್ರಾಮ ಪಂಚಾಯ್ತಿಮಟ್ಟದಲ್ಲಿ ಪ್ರತಿಭಟನೆಗಳು ಮುಂದುವರೆಯಲಿವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Reach Count: 
32584