Kshetra Samachara

Local News Subject: 
ಬೆಡ್,ವೆಂಟಿಲೇಟರ್ ಖಾಲಿಯಾಗುತ್ತಿದ್ದರೂ ನಿಲ್ಲುತ್ತಿಲ್ಲ ಡೆತ್ ರೇಟ್: ಜಿಲ್ಲೆಯ ಜನರಲ್ಲಿ ಆತಂಕ...!
City: 
Hubballi-Dharwad
Video Thumbnail: 
PublicNext-473196-511715-Hubballi-Dharwad-Health-and-Fitness-COVID-node
Category: 
Health & Fitness
COVID
Body: 

ಹುಬ್ಬಳ್ಳಿ: ಕಿಲ್ಲರ್ ಕೊರೋನಾ ವೈರಸ್ ರೌದ್ರ ನರ್ತನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಕೇಸ್ ಗಳ ಸಂಖ್ಯೆ ಕಡಿಮೆ ಆದರೂ ಡೆತ್ ರೇಟಿಂಗ್ ಮಾತ್ರ ಕಡಿಮೆ ಆಗುತ್ತಿಲ್ಲ.

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆಯ ಮರಣ ಮೃದಂಗದ ಸದ್ದು ಹೆಚ್ಚುತ್ತಲೇ ಇದೆ.
ಏಪ್ರಿಲ್ ನಿಂದ ಇಲ್ಲಿಯವರೆಗೆ ಸಾವಿನ ಸಂಖ್ಯೆಯಲ್ಲಿ ಧಿಡೀರ್ ಹೆಚ್ಚಳವಾಗಿದೆ. 72 ದಿನಗಳಲ್ಲಿ 417 ಜನ ಕೊರೊನಾ ಗೆ ಬಲಿಯಾಗಿರುವುದು ಜನರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟು ಹಾಕಿದೆ.

ಮೇ ತಿಂಗಳಲ್ಲೇ 267 ಜನರನ್ನು ಬಲಿ ಪಡೆದ ಕೊರೋನಾ ಹೆಮ್ಮಾರಿ. ಜೂನ್ ತಿಂಗಳ 10 ದಿನಗಳ ಡೆತ್ ರೇಟ್ ಸಹ ದುಪ್ಪಟ್ಟು ಆಗಿದೆ. ಕೊರೋನಾ ಕೇಸ್ ಗಳು ಕಡಿಮೆ ಆದರೂ ನಿತ್ಯ 10ಕ್ಕೂ ಹೆಚ್ಚು ಸಾವು ಸಂಭವಿಸುತ್ತದೆ. ಈ ಹಿನ್ನಲೆಯಲ್ಲಿ ಡೆತ್ ರೇಟಿಂಗ್ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಬೆಡ್, ವೆಂಟಿಲೇಟರ್, ಐಸಿಯು ಖಾಲಿಯಾಗುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ.

Reach Count: 
51515