Public News

News Subject: 
ಬೆಳಗಾವಿಯ "ಟಿವಿ ಸಂಪಾದಕನ" ಬರ್ಬರ ಹತ್ಯೆ: ಆರೋಪಿಗಳು ಪರಾರಿ
Upload Image: 
PublicNext--511598--node-nid
Category: 
Crime
Body: 

ಮೂಡಲಗಿ: ತಾಲೂಕಿನ ಸಮೀಪದ ರಾಜಾಪುರ ಗ್ರಾಮದ ಚುನಿಮಟ್ಟಿಯಲ್ಲಿ ಮಹಾಯುದ್ದ ಟಿವಿ ಸಂಪಾದಕನ ಬರ್ಬರ ಹತ್ಯೆ ಮಾಡಲಾಗಿದೆ. ಹೌದು ಬೆಳಗಾವಿ ಜಿಲ್ಲೆಯಲ್ಲಿ ಮಹಾಯುದ್ದ ಟಿವಿ ಸಂಪಾದಕನನ್ನ ದುಷ್ಕರ್ಮಿಗಳು ರಾತ್ರೋ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆಗೆ ಇನ್ನು ಕಾರಣ ತಿಳಿದು ಬಂದಿಲ್ಲ. ಮನೆಯಿಂದ ಕೇವಲ 100 ಮೀಟರ್ ಅಂತರದಲ್ಲಿ ಶವ ಪತ್ತೆ ಯಾಗಿದ್ದು, ರಾತ್ರಿ ನೋಡಿದ ಜನ ದಂಗಾಗಿಹೋಗಿದ್ದರು.

ಇನ್ನು ತನಿಖೆಯ ನಂತರ ಆರೋಪಿಗಳ ಹೆಸರು ಬಯಲಿಗೆ ಬರಲಿದೆ. ಇನ್ನು ಚಿಗುರುವ ವಯಸ್ಸಿನಲ್ಲೆ ಶಿವಾನಂದ ಕಾಚ್ಯಾಗೋಳ ಅವರ ಬರ್ಬರ ಹತ್ಯೆ ನಿಜಕ್ಕೂ ಭಯಂಕರವಾಗಿದೆ. ಇನ್ನೂ ಸ್ಥಳಕ್ಕೆ ದಾವಿಸಿದ ಘಟಪ್ರಭಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ತನಿಖೆ ಮಾಡುತ್ತಿದ್ದಾರೆ.

Reach Count: 
45811