Kshetra Samachara

Local News Subject: 
ಮಾರ್ಪಳ್ಳಿಯ ನಂದ ಗೋಕುಲ ಯುವಕ ಮಂಡಲದ ವತಿಯಿಂದ ಸಹಾಯಧನ ವಿತರಣಾ ಕಾರ್ಯಕ್ರಮ
City: 
Udupi
Mangalore
Video Thumbnail: 
PublicNext-473089-511542-Udupi-Mangalore-News-Public-News-COVID-node
Category: 
News
Public News
COVID
Body: 

ಉಡುಪಿ : ಮಾರ್ಪಳ್ಳಿಯ ನಂದ ಗೋಕುಲ ಯುವಕ ಮಂಡಲದ ವತಿಯಿಂದ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಗಳಿಗೆ ಸಹಾಯಧನ ಮತ್ತು ಕೊಡೆ ವಿತರಣಾ ಕಾರ್ಯಕ್ರಮ ಗುರುವಾರ ನಡೆಯಿತು.

ಈ ವೇಳೆ ವೃತ್ತ ನಿರೀಕ್ಷಕ ಪ್ರಮೋದ್ ಅವರು ಮಾತನಾಡಿ, ಕೋವಿಡ್ ನಿಂದ ಜನರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆರೋಗ್ಯ ಇಲಾಖೆಯ ಮಹತ್ವದ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಯೂ ಅರಿವು ಮೂಡುತ್ತಿದೆ.
ಕೋವಿಡ್ ವಾರಿಯರ್ಸ್‌ ಗಳಾದ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಸರಕಾರ ನೀಡುವ ಸೌಲಭ್ಯ ದ ಜೊತೆಗೆ ಸ್ಥಳೀಯವಾಗಿ ಸಣ್ಣ ಮಟ್ಟದಲ್ಲಿ ಸಹಕಾರ ನೀಡುವ ಕಾರ್ಯ ನಿಜಕ್ಕೂ ಅರ್ಥ ಪೂರ್ಣ ವಾದ ಕಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ 8 ಆಶಾಕಾರ್ಯಕರ್ತೆಯರು, 3 ದಾದಿಯರಿಗೆ ಸಹಿತ ಅನಾರೋಗ್ಯ ಪೀಡಿತ ಎರಡು ಕುಟುಂಬಗಳಿಗೆ ಒಟ್ಟು 60 ಸಾವಿರ ಧನ ಸಹಾಯ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಂದಗೋಕುಲ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ತಂತ್ರಿ, ಅಲೆವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ, ಕೊಡುಗೈ ದಾನಿ ಕಂಬಳ ಮನೆ ರಾಜೇಶ್ ಶೆಟ್ಟಿ, ತ್ರಿಷಾ ಸಮೂಹ ಸಂಸ್ಥೆಯ ಸಿಎ ಗೋಪಾಲಕೃಷ್ಣ ಎನ್ ಎಸ್, ಕೊರಂಗ್ರಪಾಡಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಸುವರ್ಣ ಮಾರ್ಪಳ್ಳಿ, ಲಚ್ಚೇಂದ್ರ ಟಿ ದೇವಾಡಿಗ, ಡಾ.ಗುರುರಾಜ್ ಭಟ್, ನಗರ ಠಾಣೆಯ ವಾಸಪ್ಪ ನಾಯ್ಕ್, ನಾರಾಯಣ ಬಿ.‌ಉಪಸ್ಥಿತರಿದ್ದರು.

ವಿಜಯ್ ಆರ್ ಅಮೀನ್ ಸ್ವಾಗತಿಸಿ,‌ ಅಶೋಕ್ ಧನ್ಯವಾದವಿತ್ತರು .

Reach Count: 
9713