Kshetra Samachara

Local News Subject: 
ಲಾಕ್ ಡೌನ್ ಆದ ಗ್ರಾಮದಲ್ಲಿ ಜಿಲ್ಲಾಡಳಿತದ ನಿಯಮ‌ ಉಲ್ಲಂಘನೆ ವಿರುದ್ಧ ಯುವಕನ‌ ಪ್ರಶ್ನೆ-ವಿಡಿಯೋ ವೈರಲ್
City: 
Udupi
Mangalore
Video Thumbnail: 
PublicNext-473064-511518-Udupi-Mangalore-Public-Feed-Public-News-COVID-node
Category: 
Public Feed
Public News
COVID
Body: 

ಕುಂದಾಪುರ: ಕೊರೊನಾ ಹಿನ್ನಲೆ ಲಾಕ್ ಡೌನ್ ಆಗಿರುವ ಗ್ರಾಮದ ಗಡಿಯಲ್ಲಿ ಹಾಕಲಾದ ಪೊಲೀಸ್ ಬ್ಯಾರಿಗೇಟ್‌ ಬಳಿ ಯುವಕನೊಬ್ಬ, ಜಿಲ್ಲಾಡಳಿತದ ನಿಯಮ ಉಲ್ಲಂಘನೆ ಮಾಡುತ್ತಿರುದನ್ನು ಪ್ರಶ್ನಿಸಿ ಗಲಾಟೆ ಮಾಡಿದ ವಿಡಿಯೋ ಬಾರೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಉಡುಪಿ ಜಿಲ್ಲೆಯ ಕುಂದಾಪುರದ ಕಂಬದಕೋಣೆ ಗ್ರಾಮದಲ್ಲಿ ಗಡಿಯಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಕಂಬದಕೋಣೆ ಗ್ರಾಮವನ್ನು ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನಲೆ ಗ್ರಾಮ ಪ್ರವೇಶ ಮಾಡುವ ಗಡಿಗಳಲ್ಲಿ ಪೊಲೀಸ್ ಬ್ಯಾರಿಗೇಟ್ ಅಳವಡಿಸಲಾತ್ತು. ಅಲ್ಲಿಗೆ ಬಂದ ಗ್ರಾಮದ ಯುವಕನೊಬ್ಬ, ನೀವು ಎಲ್ಲರಿಗೂ ಒಂದೇ ನಿಯಮ ಮಾಡಿ, ಶ್ರೀಮಂತರಿಗೆ ನಿಮ್ಮ ನಿಯಮ ಅನ್ವಯ ಆಗುದಿಲ್ಲ ಬಡವರಿಗೆ ಮಾತ್ರ ನಿಯಮ ಮಾಡ್ತೀರಿ, ರೂಲ್ಸ್ ಅಂದ್ರೆ ಎಲ್ಲರಿಗೂ ಒಂದೇ ಅಂತ ಗಲಾಟೆ ಮಾಡಿದ್ದಾನೆ.

ಈ ವೇಳೆ ಸ್ಥಳದಲ್ಲಿ ಇದ್ದ ಯುವಕನೊಬ್ಬ ಯುವಕನಿಗೆ ಹೊಡೆಯಲು ಮುಂದಾಗಿದ್ದು ಕೂಡ ವಿಡಿಯೋದಲ್ಲಿ ಇದೆ. ವಿಡಿಯೋದಲ್ಲಿ ಪೊಲೀಸ್ ಬ್ಯಾರಿಗೇಟ್ ಇದ್ರೂ ಪೊಲೀಸರು ಇರಲಿಲ್ಲ, ಅಲ್ಲದೇ ಇಷ್ಟು ಜನ ಯುವಕರು ಗ್ರಾಮ ಕಾಯುವ ಅವಶ್ಯಕತೆ ಏನಿದೆ ಎನ್ನುವ ಪ್ರಶ್ನೆ ಕೂಡ ಸಾರ್ವಜನಿಕರಿಂದ ವ್ಯಕ್ತವಾಗಿದೆ..ಘಟನೆಯನ್ನು ಸ್ಥಳದಲ್ಲಿ ಇದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ಸಖತ್ ವೈರಲ್, ಪರ ವಿರೋಧ ಚರ್ಚೆ ನಡೆಯುತ್ತಿದೆ.

Reach Count: 
10900