Public News

News Subject: 
ಭಾರತೀಯ 6 ಕಂಪನಿ ಸೀಫುಡ್ ಆಮದು ನಿಲ್ಲಿಸಿದ ಚೀನಾ!
Upload Image: 
PublicNext--511490--node-nid
Category: 
Health & Fitness
International
Body: 

ನವದೆಹಲಿ/ಬೀಜಿಂಗ್ : ಕೊರೊನಾ ಹುಟ್ಟಿಗೆ ಕಾರಣವಾದ ಚೀನಾ ಸದ್ಯ ಭಾರತೀಯ 6 ಕಂಪನಿಗಳಿಂದ ಫ್ರೋಜನ್ ಸೀಫುಡ್ ಉತ್ಪನ್ನಗಳ ಆಮದಿಗೆ ಬ್ರೇಕ್ ಹಾಕಿದೆ. ಈ ಉತ್ಪನ್ನಗಳ ಹೊರಗಣ ಪ್ಯಾಕೇಜಿಂಗ್ ನಲ್ಲಿ ಕೊರೊನಾ ವೈರಸ್ ನ ಕುರುಹುಗಳು ಪತ್ತೆಯಾಗಿವೆ ಎಂದು ಚೀನೀ ಕಸ್ಟಮ್ಸ್ ಇಲಾಖೆ ಕಾರಣ ನೀಡಿದೆ.

ಕಳೆದ ವರ್ಷದ ಆರಂಭದಿಂದಲೂ ಚೀನಾ, ಪ್ರಪಂಚದ ವಿವಿಧೆಡೆಯಿಂದ ಆಮದು ಮಾಡಿದ ಫ್ರೋಜನ್ ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವ ಪ್ರತೀತಿ ಹೊಂದಿದೆ. ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ವೈರಸ್ ನ ಕುರುಹುಗಳು ಕಂಡರೆ ಸಂಬಂಧಿತ ಕಂಪನಿಗಳಿಂದ ಆಮದನ್ನು ಸ್ಥಗಿತಗೊಳಿಸುತ್ತಾ ಬಂದಿದೆ ಎನ್ನಲಾಗಿದೆ.

Reach Count: 
51654